ಬೆಂಗಳೂರು : ಬೆಂಗಳೂರಿನ ಕೆ.ಆರ್ ವೃತ್ತದಲ್ಲಿರುವ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 4ನೇ ಸೆಮಿಸ್ಟರ್ ಬಿ.ಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ ವಿಷಯಗಳನ್ನು
ಬೋಧಿಸಲು LIB/LLM/Ph.D degree in Law ಹೊಂದಿರುವ ಅಭ್ಯರ್ಥಿಗಳಿಂದ ಎಐಸಿಟಿಇ/ಯುಜಿಸಿ ನಿಯಮಗಳಿಗನುಸಾರ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು www.uvce.karnataka.gov.in ನಿಂದ ನಿಗಧಿತ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು ಅರ್ಜಿಯನ್ನು ಸಂಬಂಧಿತ ದಾಖಲೆಗಳ ಪ್ರತಿಗಳೊಂದಿಗೆ ಕುಲಸಚಿವರ ಕಛೇರಿ, ಯುವಿಸಿಇ, ಕೆ.ಆರ್ ವೃತ್ತ ಇಲ್ಲಿಗೆ ಡಿಸೆಂಬರ್ 29 ರ ಒಳಗಾಗಿ ಸಲ್ಲಿಸುವುದು. ನಿಗದಿತ ದಿನಾಂಕದ ನಂತರ ಸ್ವೀಕರಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಸಮನ್ವಯಧಿಕಾರಿ, ತಾಂತ್ರಿಕೇತರ ವಿಷಯ, ಇವರನ್ನು ಸಂಪರ್ಕಿಸಬಹುದು. ಸಂದರ್ಶನದ ದಿನಾಂಕವನ್ನು ವೆಬ್‍ಸೈಟ್‍ನಲ್ಲಿ ತಿಳಿಸಲಾಗುತ್ತದೆ ಅಥವಾ ಅರ್ಹ ಅಭ್ಯರ್ಥಿಗಳಿಗೆ ನೇರವಾಗಿ ತಿಳಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರು ತಿಳಿಸಿದ್ದಾರೆ.
