ಸಮಗ್ರ ಸುದ್ದಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ : ಪ್ರಯಾಣಿಕರ ಸುರಕ್ಷತೆ ಹಲವು ಕ್ರಮಗಳು

Share

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆ.ಎಸ್.ಆರ್.ಟಿ.ಸಿ) ಬಸ್ಸುಗಳಲ್ಲಿ ಪ್ರಯಾಣಿಸುವಾಗ ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ರಕ್ಷಣೆಗೆ ಅಗತ್ಯವಿರುವ ಹಲವು ಸುರಕ್ಷತಾ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಕೆ.ಎಸ್. ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಕ್ರಮಗಳು:

ಎಲ್ಲಾ ಬಸ್ಸುಗಳ ಒಳಭಾಗದಲ್ಲಿ ಪ್ಯಾನಿಕ್ ಬಟನ್‍ಗಳನ್ನು ಅಳವಡಿಸಲಾಗಿದೆ. ಅಗ್ನಿ ಅವಘಡ, ವೈದ್ಯಕೀಯ ತುರ್ತು ಪರಿಸ್ಥಿತಿ, ಪ್ರಯಾಣಿಕರ ಸುರಕ್ಷತೆಗೆ ಅಪಾಯ ಈ ತುರ್ತು ಸಂದರ್ಭಗಳಲ್ಲಿ ಮಾತ್ರ ಪ್ಯಾನಿಕ್ ಬಟನ್ ಒತ್ತಬೇಕು. ಪ್ಯಾನಿಕ್ ಬಟನ್ ಒತ್ತಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ತಲುಪುತ್ತದೆ.

ಅಗ್ನಿ ನಂದಕ (ಫೈರ್ ಎಕ್ಸಿಂಗ್ಲಿಷರ್):

ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಅಗ್ನಿ ನಂದಕಗಳನ್ನು ಒದಗಿಸಲಾಗಿದೆ. ಅಗ್ನಿ ಅವಘಡ ಸಂಭವಿಸಿದಲ್ಲಿ ತಕ್ಷಣ ಚಾಲಕರಿಗೆ ಮಾಹಿತಿ ನೀಡಬೇಕು. ತರಬೇತಿ ಪಡೆದಿದ್ದರೆ ಅಗ್ನಿ ನಂದಕವನ್ನು ಸಿಬ್ಬಂದಿಯ ಸೂಚನೆಗಳನ್ನು ಶಾಂತವಾಗಿ ಅನುಸರಿಸಬೇಕು.

ತುರ್ತು ನಿರ್ಗಮನ ದ್ವಾರ:

ತುರ್ತು ನಿರ್ಗಮನ ದ್ವಾರಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಸಾಮಾನ್ಯ ಬಾಗಿಲುಗಳು ತೆರೆಯಲು ಆಗದಿದ್ದಾಗ ಅಥವಾ ಸೂಚನೆ ದೊರೆತಾಗ ಮಾತ್ರ ತುರ್ತು ನಿರ್ಗಮನ ದ್ವಾರವನ್ನು ಬಳಸಬೇಕು. ತುರ್ತು ನಿರ್ಗಮನ ದ್ವಾರವನ್ನು ಸಿಬ್ಬಂದಿಗಳಾಗಲಿ ಅಥವಾ ಪ್ರಯಾಣಿಕರಾಗಲಿ ಲಗ್ಗೇಜುಗಳಿಂದ ಮುಚ್ಚಬಾರದು.

ತುರ್ತು ಹ್ಯಾಮರ್ (ಸುತ್ತಿಗೆ):

ಬಸ್ಸುಗಳಲ್ಲಿ ಕಿಟಕಿಗಳ ಬಳಿ ತುರ್ತು ಹ್ಯಾಮರ್‍ಗಳನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಕಿಟಕಿಯ ಗಾಜನ್ನು ಒಡೆಯಲು ಬಳಸಬೇಕು. ಗಾಜು ಸುಲಭವಾಗಿ ಒಡೆಯಲು ಅದರ ಮೂಲೆ ಭಾಗದಲ್ಲಿ ಹೊಡೆಯಬೇಕು.

ಪ್ರಯಾಣಿಕರ ಸುರಕ್ಷತಾ ಸೂಚನೆಗಳು:

ಬಸ್ ಚಲಿಸುತ್ತಿರುವಾಗ ಅಸನದಲ್ಲೇ ಕುಳಿತುಕೊಳ್ಳಬೇಕು, ಸಿಬ್ಬಂದಿಯಿಂದ ನೀಡಲಾಗುವ ಸೂಚನೆಗಳನ್ನು ಅನುಸರಿಸಬೇಕು. ತುರ್ತು ಸಂದರ್ಭಗಳಲ್ಲಿ ಮಕ್ಕಳು, ವೃದ್ಧರು ಹಾಗೂ ಅಂಗವಿಕಲರಿಗೆ ಸಹಾಯ ಮಾಡಬೇಕು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಚಾಲಕರಿಗೆ ಮಾಹಿತಿ ನೀಬೇಕು. ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರೊಂದಿಗೆ ಸಹಕರಿಸಬೇಕು.

ಕೆ.ಎಸ್.ಆರ್.ಟಿ.ಸಿ ಬದ್ಧತೆ:

ಕೆ.ಎಸ್.ಆರ್.ಟಿ.ಸಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಅರಾಮದಾಯಕ ಪ್ರಯಾಣವನ್ನು ಒದಗಿಸಲು ಬದ್ಧವಾಗಿದೆ. ಪ್ರಯಾಣಿಕರ ಜಾಗೃತೆ ಮತ್ತು ಸಹಕಾರದಿಂದ ಎಲ್ಲರಿಗೂ ಸುರಕ್ಷಿತ ಪ್ರಯಾಣ ಸಾಧ್ಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page