ಸಮಗ್ರ ಸುದ್ದಿ

ಕರ್ನಾಟಕ ಕಾರಾಗೃಹ ಸುಧಾರಣೆಗಳ ಕುರಿತ ವರದಿ ಸಲ್ಲಿಕೆ

Share


ಬೆಂಗಳೂರು : ಕರ್ನಾಟಕ ಕಾರಾಗೃಹ ಸುಧಾರಣೆಗಳ ಕುರಿತಂತೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಮಾನ್ಯ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರಿಗೆ ಇಂದು ವರದಿ ಸಲ್ಲಿಸಿತು.

ರಾಜ್ಯದ ಕಾರಾಗೃಹಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು, ಭದ್ರತಾ ಕ್ರಮಗಳು ಮತ್ತು ಕಾರಾಗೃಹ ಸುಧಾರಣಾ ಕ್ರಮಗಳ ಕುರಿತಂತೆ ಸಮಿತಿಯು ಸಲ್ಲಿಸಿರುವ ಶಿಫಾರಸ್ಸುಗಳ ಕುರಿತು ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ.

ಸಮಿತಿಯ ಮುಖ್ಯಸ್ಥರಾದ ಕಾನೂನು ಸುವಸ್ಥೆ ಎಡಿಜಿಪಿ ಆರ್.ಹಿತೇಂದ್ರ, ಐಜಿಪಿ ಸಂದೀಪ್‌ ಪಾಟೀಲ್, ಎಸ್‌ಪಿಗಳಾದ ಸಿ.ಬಿ.ರಿಷ್ಯಂತ್, ಅಮರನಾಥ್ ರೆಡ್ಡಿ ಅವರು ಇದ್ದರು.


Share

You cannot copy content of this page