ಬೆಂಗಳೂರು : ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ನಾಡಿನ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಶುಭ ಕೋರಿರುವ ಮಾಜಿ ಪ್ರಧಾನಿಗಳು; ಸಂಕ್ರಾಂತಿ ದಿನ ಸೂರ್ಯದೇವನ ಪಥ ಬದಲಾಗುತ್ತದೆ. ಅಂತೆಯೇ ಎಲ್ಲರ ಬದುಕಿನಲ್ಲಿ ಕಹಿ ನೆನಪುಗಳು ಅಳಿದು, ಸುಖ ಸಂತೋಷ, ನೆಮ್ಮದಿ ಸಮೃದ್ಧಿಯ ಪಥ ತೆರೆದುಕೊಳ್ಳಲಿ ಎಂದು ಮನಸಾರೆ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಸಂಕ್ರಾಂತಿಯು ರೈತರಿಗೆ ಅತೀ ಮುಖ್ಯವಾದ ಹಬ್ಬ. ಫಸಲು ಮನೆಗೆ ಬರುವ ಸುಸಮಯ ಇದಾಗಿದ್ದು, ರೈತರು ಭೂಮಿ ತಾಯಿಗೆ ಕೃತಜ್ಞತೆ ಅರ್ಪಿಸಿ ಸಂಭ್ರಮಿಸುವ ಸುಂದರ, ಅರ್ಥಪೂರ್ಣ ಆಚರಣೆಯಾಗಿದೆ. ಸಂಕ್ರಾಂತಿ ಎಲ್ಲರಿಗೂ ಒಳಿತನ್ನೇ ಉಂಟು ಮಾಡಲಿ. ಉತ್ತಮ ಆಯುರಾರೋಗ್ಯ ತಂದು, ಪ್ರತಿಯೊಬ್ಬರ ಮನೆ ಮನಗಳಲ್ಲಿ ಸುಖಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಲಿ ಅವರು ಆಶಿಸಿದ್ದಾರೆ.
