ಸಮಗ್ರ ಸುದ್ದಿ

ಇಂದು ವಿಶ್ವ ಟೆಲಿವಿಷನ್ ದಿನಾಚರಣೆ |ಮಾಧ್ಯಮ ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ

Share

ವಿಶ್ವ ಟೆಲಿವಿಷನ್ ದಿನವನ್ನು ಇಂದು ಆಚರಿಸಲಾಗುತ್ತಿದೆ. ಮಾಹಿತಿ, ಶಿಕ್ಷಣ ಒದಗಿಸುವ ಮತ್ತು ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುವ ಪ್ರಮುಖ ಮಾಧ್ಯಮವನ್ನಾಗಿ ಗುರುತಿಸುವುದು ಈ ದಿನದ ಆಶಯ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯದ ಪ್ರಸರಣ ಜಾಲವಾಗಿರುವ ಪ್ರಸಾರ ಭಾರತಿಯ ವತಿಯಿಂದ ಈ ದಿನವನ್ನು ಆಚರಿಸಲಾಯಿತು.

ಭಾರತದಲ್ಲಿ ದೂರದರ್ಶನ ಪ್ರಸಾರವು ಆಲ್ ಇಂಡಿಯಾ ರೇಡಿಯೋ ಮೂಲಕ ಪ್ರಾಯೋಗಿಕವಾಗಿ 1959ರ ಸಪ್ಟೆಂಬರ್ 15ರಿಂದ ಆರಂಭವಾಗಿದ್ದು, ನಂತರ 1965ರಿಂದ ನಿಯಮಿತ ದೈನಂದಿನ ಪ್ರಸಾರ ಆರಂಭವಾಗಿದೆ.


1996ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನವೆಂಬರ್ 21 ನ್ನು ಜಾಗತಿಕ ಮಟ್ಟದಲ್ಲಿ ಟೆಲಿವಿಷನ್ ದಿನವನ್ನಾಗಿ ಆಚರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಪ್ರಸ್ತುತ ಭಾರತದ ಟೆಲಿವಿಷನ್ ಜಾಲವು 23 ಕೋಟಿ ಮನೆಗಳು ಸೇರಿದಂತೆ ಒಟ್ಟು 90 ಕೋಟಿ ವೀಕ್ಷಕರನ್ನು ಒಳಗೊಂಡಿದೆ. ಕಳೆದ ಮಾರ್ಚ್ ವೇಳೆಗ ದೇಶದಲ್ಲಿ ಉಪಗ್ರಹ ಆಧಾರಿತ 918 ಖಾಸಗಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸರಣ ವಲಯದ ಸಾಮರ್ಥ್ಯವನ್ನು ವ್ಯಕ್ತಡಿಸುತ್ತದೆ.

ಭಾರತದ ಮಾಧ್ಯಮ ಮತ್ತು ಮನೋರಂಜನಾ ವಲಯವು ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದು, 2024ರಲ್ಲಿ 2.5 ಟ್ರಿಲಿಯನ್ ರೂಪಾಯಿ ವಹಿವಾಟು ನಡೆಸಿತ್ತು . 2027ರ ವೇಳೆಗೆ 3 ಟ್ರಿಲಿಯನ್ ರೂಪಾಯಿಗೂ ಅಧಿಕ ವಹಿವಾಟು ನಡೆಸುವುದಾಗಿ ಅಂದಾಜಿಸಲಾಗಿದೆ


Share

You cannot copy content of this page