ಮೈಸೂರು: ರಾಮನಗರಂ ರೈಲ್ವೆ ನಿಲ್ದಾಣದ ಯಾರ್ಡ್‌ನಲ್ಲಿ ಎಂಜಿನಿಯರಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ವಿವಿಧ ಮೆಮು ರೈಲುಗಳ ಸಂಚಾರ ಭಾಗಶಃ ರದ್ದುಗೊಳ್ಳಲಿದೆ.
ಮಾರ್ಚ್ 5ರಂದು ಅಶೋಕಪುರಂನಿಂದ ಹೊರಡುವ ರೈಲು ಸಂಖ್ಯೆ 66580 ಅಶೋಕಪುರಂ–ಬೆಂಗಳೂರು ರೈಲು ಚನ್ನಪಟ್ಟಣದವರೆಗೆ ಮಾತ್ರ ಸಂಚರಿಸಲಿದೆ. ಚನ್ನಪಟ್ಟಣದಿಂದ ಕೆಎಸ್‌ಆರ್ ಬೆಂಗಳೂರು ನಡುವಿನ ಸಂಚಾರ ರದ್ದಾಗಿರುತ್ತದೆ.
ಮಾರ್ಚ್ 6ರಂದು ರೈಲು ಸಂಖ್ಯೆ 66579 ಬೆಂಗಳೂರು–ಅಶೋಕಪುರಂ ರೈಲು ಕೆಎಸ್‌ಆರ್ ಬೆಂಗಳೂರಿನ ಬದಲಿಗೆ ಚನ್ನಪಟ್ಟಣದಿಂದ ತನ್ನ ಪ್ರಯಾಣ ಆರಂಭಿಸಲಿದೆ. ಅಂದರೆ ಬೆಂಗಳೂರು ಮತ್ತು ಚನ್ನಪಟ್ಟಣ ನಡುವೆ ಈ ರೈಲು ಸೇವೆ ಲಭ್ಯವಿರುವುದಿಲ್ಲ.
