ಸಮಗ್ರ ಸುದ್ದಿ

ಪ್ರದರ್ಶನದ ಪುಷ್ಪಗಳು, ಮರುಬಳಕೆಯ ವಸ್ತುಗಳಾಗಬೇಕು: ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್

Share

ಬೆಂಗಳೂರು, ನ. 27: ಫಲ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿರುವ ಪುಷ್ಪಗಳನ್ನು ತ್ಯಾಜ್ಯ ವಾಗಿಸದೇ ಅವುಗಳನ್ನು ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚಿಸಿದರು.

ತೋಟಗಾರಿಕೆ ಇಲಾಖೆಯಿಂದ ನಗರದ ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನದಲ್ಲಿ 11 ದಿನಗಳ ಕಾಲ ಏರ್ಪಡಿಸಿರುವ “ಹೂಗಳ ಹಬ್ಬ-2025” ಕಲೆ ಸಂಸ್ಕೃತಿಯ ಸಮಾಗಮ ಉದ್ಘಾಟಿಸಿ ಫಲ ಪುಷ್ಪ ಪ್ರದರ್ಶನ ವೀಕ್ಷಿಸಿದರು.

ತೋಟಗಾರಿಕೆ ಇಲಾಖೆಯು ವಿಶೇಷವಾಗಿ ಮಕ್ಕಳಿಗಾಗಿ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ನಮ್ಮ ಜೀವನ ಶೈಲಿಯನ್ನು ನೈಸರ್ಗಿಕವಾಗಿ ನಡೆಸಿದರೆ ಅದು ಎಲ್ಲರಿಗೂ ಒಳ್ಳೆಯದು ಎಂಬ ಪಾಠ ಎಲ್ಲರೂ ಈ ಪುಷ್ಪ ಪ್ರದರ್ಶನದಿಂದ ಅರಿತು ಅನುಸರಿಸಬೇಕು. ಕಬ್ಬನ್ ಉದ್ಯಾನವನದ ಸುಂದರ ಪ್ರಕೃತಿಯಲ್ಲಿ ಆಯೋಜಿಸಲಾಗಿರುವ ಪುಷ್ಪ ಪ್ರದರ್ಶನಕ್ಕೆ ಎಲ್ಲರೂ ಆಗಮಿಸಿ ವೀಕ್ಷಿಸುವ ಮೂಲಕ ಉದ್ಯಾನವನದ ಸೌಂದರ್ಯವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.


Share

You cannot copy content of this page