ಬೆಂಗಳೂರು:ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ-2027ರ ಮೊದಲ ಹಂತ ಮನೆ-ಮನೆಗೆ ಭೇಟಿ ನೀಡಿ ಮನೆ ಪಟ್ಟಿ ಸಿದ್ದಪಡಿಸುವ ಕಾರ್ಯವನ್ನು ಇಂದಿನಿಂದ ಆರಂಭಿಸಲಾಗುತ್ತಿದೆ.
ಈ ವ್ಯಾಪಕ ಕಾರ್ಯವನ್ನು 25,000 ಕ್ಕೂ ಹೆಚ್ಚು ಗಣತಿದಾರರು (Enumerators) ಮತ್ತು ಮೇಲ್ವಿಚಾರಕರು (Supervisors) ನಡೆಸಲಿದ್ದು, ಸಾವಿರಾರು ಸಿಬ್ಬಂದಿ ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಎಲ್ಲಾ ಮನೆಗಳ ಸಮಗ್ರ ಮತ್ತು ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
05 ನಗರ ಪಾಲಿಕೆಗಳಲ್ಲಿ ಸಿಬ್ಬಂದಿ ನಿಯೋಜನೆ
ಬೆಂಗಳೂರು ಉತ್ತರ ನಗರ ಪಾಲಿಕೆ 4,497, ಬೆಂಗಳೂರು ಪಶ್ಚಿಮ ನಗರ ಪಾಲಿಕೆ 6,653, ಬೆಂಗಳೂರು ಪೂರ್ವ ನಗರ ಪಾಲಿಕೆ 3,419, ಬೆಂಗಳೂರು ಕೇಂದ್ರ ನಗರ ಪಾಲಿಕೆ 4,068,
ಬೆಂಗಳೂರು ದಕ್ಷಿಣ ನಗರ ಪಾಲಿಕೆ 5,068 ಸೇರಿದಂತೆ
ಒಟ್ಟು 23,705 ನಿಯೋಜಿಸಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ 23,705 ಗಣತಿದಾರರು, 2,912 ಮೇಲ್ವಿಚಾರಕರು ಸೇರಿದಂತೆ 26,616 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಎಲ್ಲಾ ನಾಗರಿಕರು ಜನಗಣತಿ ತಂಡಗಳಿಗೆ ಪೂರ್ಣ ಸಹಕಾರ ನೀಡುವಂತೆ ಮತ್ತು ಅಗತ್ಯವಾದ ನಿಖರ ಮಾಹಿತಿಯನ್ನು ಒದಗಿಸುವಂತೆ ವಿನಂತಿಸಲಾಗಿದೆ. ಜನಗಣತಿಯಲ್ಲಿ ಭಾಗವಹಿಸುವುದು ಒಂದು ಮಹತ್ವದ ರಾಷ್ಟ್ರೀಯ ಕರ್ತವ್ಯವಾಗಿದೆ.
ಜನಗಣತಿ ಉದ್ದೇಶಕ್ಕಾಗಿ ಮಾಹಿತಿಯನ್ನು ನೀಡುವುದು ಜನಗಣತಿ ಕಾಯ್ದೆ 1,948 ಅನ್ವಯ ಕಡ್ಡಾಯವಾಗಿದ್ದು, ಮಾಹಿತಿ ನೀಡಲು ನಿರಾಕರಿಸಿದಲ್ಲಿ ಅಥವಾ ಸಿಬ್ಬಂದಿಗಳಿಗೆ ಅಸಹಕಾರ ತೋರಿದಲ್ಲಿ ಕಾಯ್ದೆಯ ವಿಧಿಗಳ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು.
