ಮೈಸೂರು: ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಮೈಸೂರು – ಅಲಿಪುರ್ ದ್ವಾರ್ ಜಂಕ್ಷನ್ – ಮೈಸೂರು ನಡುವೆ ತಲಾ ಒಂದು ಟ್ರಿಪ್ ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಸಂಚರಿಸಲಿದೆ.
ರೈಲು ಸೇವೆಗಳ ವಿವರ:
ರೈಲು ಸಂಖ್ಯೆ 06289 ಮೈಸೂರಿನಿಂದ 20 ಏಪ್ರಿಲ್ 2026 (ಸೋಮವಾರ) ರಂದು ರಾತ್ರಿ 20:15 ಗಂಟೆಗೆ ಹೊರಟು, ಗುರುವಾರ ಬೆಳಿಗ್ಗೆ 05:30 ಗಂಟೆಗೆ ಅಲಿಪುರ್ ದ್ವಾರ್ ಜಂಕ್ಷನ್ ತಲುಪಲಿದೆ.
ಮರಳಿ ದಿಕ್ಕಿನಲ್ಲಿ, ರೈಲು ಸಂಖ್ಯೆ 06290 ಅಲಿಪುರ್ ದ್ವಾರ್ ಜಂಕ್ಷನ್ನಿಂದ 24 ಏಪ್ರಿಲ್ 2026 (ಶುಕ್ರವಾರ) ರಂದು ಬೆಳಿಗ್ಗೆ 04:45 ಗಂಟೆಗೆ ಹೊರಟು, ಭಾನುವಾರ ಮಧ್ಯಾಹ್ನ 13:15 ಗಂಟೆಗೆ ಮೈಸೂರಿಗೆ ಆಗಮಿಸಲಿದೆ.
ಮಾರ್ಗ ಮಧ್ಯದಲ್ಲಿ ಈ ರೈಲು ಮಂಡ್ಯ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಬಂಗಾರಪೇಟೆ, ಕುಪ್ಪಂ, ಜೋಲಾರಪೇಟೆ, ಕಟ್ಪಾಡಿ, ರೇಣಿಗುಂಟಾ, ಗುಡೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಾಲಾಸಾ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಕ್, ಖರಗ್ಪುರ್, ಅಂಡುಲ್, ಧನಕುಣಿ, ಬರ್ಧಮಾನ, ಬಾಲ್ಫೂರ್ ಎಸ್ ನಿಕ್ಟಿನ್, ರಾಮ್ಪುರ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಭಾರಸೊಇ, ಕಿಶನ್ ಗಂಜ್, ನ್ಯೂ ಜಲ್ಪೈಗುಡಿ, ಸಿಲಿಗುರಿ, ಬಿನ್ನಗುರಿ, ಹಸೀಮರ, ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.
20 ಎಲ್ಎಚ್ಬಿ ಬೋಗಿಗಳನ್ನು ಹೊಂದಿರುವ ಈ ವಿಶೇಷ ರೈಲು ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಕ್ಲಾಸ್, ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳನ್ನು ಒಳಗೊಂಡಿರುತ್ತದೆ.
