ಸಮಗ್ರ ಸುದ್ದಿ

ಹುಬ್ಬಳ್ಳಿ ಮತ್ತು ನ್ಯೂ ಟಿನ್ಸುಕಿಯಾ ನಡುವೆ ಬೇಸಿಗೆ ವಿಶೇಷ ರೈಲು

Share

ಬೆಂಗಳೂರು: ಬೇಸಿಗೆ ರಜೆಯ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು, ನೈರುತ್ಯ ರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ನ್ಯೂ ಟಿನ್ಸುಕಿಯಾ ನಡುವೆ ಒಂದು ಟ್ರಿಪ್ ವಿಶೇಷ ರೈಲನ್ನು ಓಡಿಸಲಿದೆ.

ರೈಲು ಸಂಖ್ಯೆ 07325 ಏಪ್ರಿಲ್ 23 ರಂದು (ಗುರುವಾರ) ರಂದು ಬೆಳಗ್ಗೆ 11:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, ಭಾನುವಾರ ಮಧ್ಯಾಹ್ನ 02:30 ಗಂಟೆಗೆ ನ್ಯೂ ಟಿನ್ಸುಕಿಯಾ ತಲುಪಲಿದೆ. ಮರು ಪಯಣದಲ್ಲಿ, ರೈಲು ಸಂಖ್ಯೆ 07326 ಏಪ್ರಿಲ್ 27 (ಸೋಮವಾರ) ರಂದು ರಾತ್ರಿ 10:00 ಗಂಟೆಗೆ ನ್ಯೂ ಟಿನ್ಸುಕಿಯಾದಿಂದ ಹೊರಟು, ಗುರುವಾರ ರಾತ್ರಿ 11:00 ಗಂಟೆಗೆ ಹುಬ್ಬಳ್ಳಿ ಆಗಮಿಸಲಿದೆ.

ಮಾರ್ಗದಲ್ಲಿ, ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಎಸ್ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಬಂಗಾರಪೇಟೆ, ಕುಪ್ಪಂ, ಜೋಲಾರಪೇಟೆ, ಕಟ್ಪಾಡಿ, ರೇಣಿಗುಂಟ, ಗುಡೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಾಲಸಾ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ್, ಕಟಕ್, ಭದ್ರಕ್, ಖರಗ್ಪುರ್, ಆಂಡುಲ್, ದನಕುಣಿ, ಬರ್ದ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ್ ಹಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಬರ್ಸೋಯಿ, ಕಿಶನ್ಗಂಜ್, ನ್ಯೂ ಜಲ್ಪೈಗುರಿ, ನ್ಯೂ ಕೂಚ್ ಬೆಹಾರ್, ನ್ಯೂ ಅಲಿಪುರ್ ದ್ವಾರ, ಕೊಕ್ರಜಾರ್, ನ್ಯೂ ಬೊಂಗೈಗಾಂವ್, ಬರ್ಪೆಟಾ ರೋಡ್, ರಂಗಿಯಾ, ನ್ಯೂ ಮಿಸ್ಮಾರಿ, ರಂಗಾಪರ ನಾರ್ತ್, ವಿಶ್ವನಾಥ್ ಚರಾಲಿ, ಹರ್ಮುಟಿ, ನಾರ್ತ್ ಲಖಿಂಪುರ, ಧೇಮಾಜಿ ಮತ್ತು ದರ್ಭಾಂಗಾ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ವಿಶೇಷ ರೈಲು 20 ಬೋಗಿಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ 1 ಎಸಿ 2-ಟೈರ್, 6 ಎಸಿ 3-ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಲಗೇಜ್ ಮತ್ತು ಜನರೇಟರ್-ಕಮ್-ಬ್ರೇಕ್ ವ್ಯಾನ್ ಮತ್ತು 1 ಎಸ್ಎಲ್ಆರ್/ಡಿ ಬೋಗಿಗಳು ಸೇರಿವೆ.


Share

You cannot copy content of this page