ಮೈಸೂರು: ಬೇಸಿಗೆ ರಜೆಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು, ನೈಋತ್ಯ ರೈಲ್ವೆಯು ಮೈಸೂರು ಮತ್ತು ಮುಜಾಫರ್‌ಪುರ ನಡುವೆ ಒಂದು ಟ್ರಿಪ್ ಕಾಯ್ದಿರಿಸದ ವಿಶೇಷ ರೈಲು ಓಡಿಸಲಿದೆ.
ರೈಲು ಸಂಖ್ಯೆ 06243 ಮೈಸೂರು – ಮುಜಾಫರ್‌ಪುರ ರೈಲು ಏಪ್ರಿಲ್ 22, 2026ರ ಬುಧವಾರ ಬೆಳಿಗ್ಗೆ 10:05ಕ್ಕೆ ಮೈಸೂರಿನಿಂದ ಹೊರಟು, ಶುಕ್ರವಾರ ರಾತ್ರಿ 07:45ಕ್ಕೆ ಮುಜಾಫರ್‌ಪುರವನ್ನು ತಲುಪಲಿದೆ. ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 06244 ಮುಜಾಫರ್‌ಪುರ – ಮೈಸೂರು ರೈಲು ಏಪ್ರಿಲ್ 25, 2026ರ ಶನಿವಾರ ರಾತ್ರಿ 10:45ಕ್ಕೆ ಮುಜಾಫರ್‌ಪುರದಿಂದ ಹೊರಟು, ಮಂಗಳವಾರ ಬೆಳಿಗ್ಗೆ 07:45ಕ್ಕೆ ಮೈಸೂರನ್ನು ತಲುಪಲಿದೆ.
ಈ ವಿಶೇಷ ರೈಲು ಮಂಡ್ಯ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್‌ಪೇಟೆ, ಕಾಟ್ಪಾಡಿ, ರೇಣಿಗುಂಟಾ, ಗೂಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ಕೊಟ್ಟವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಕ್, ಬಾಲೇಶ್ವರ, ಖರಗ್‌ಪುರ, ದನಕುಣಿ, ಬರ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ ಹಟ್, ಮಾಲ್ಡಾ ಟೌನ್, ಕತಿಹಾರ್, ನೌಗಚಿಯಾ, ಖಗರಿಯಾ, ಬೇಗುಸರಾಯ್, ಬರೌನಿ ಮತ್ತು ಸಮಸ್ತಿಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲು ಒಟ್ಟು 18 ಸಾಮಾನ್ಯ ವರ್ಗದ ಬೋಗಿಗಳು ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್ ಒಳಗೊಂಡಂತೆ 2 ಎಸ್‌ಎಲ್‌ಆರ್ (ಸೆಕೆಂಡ್ ಕ್ಲಾಸ್ ಲಗೇಜ್ ಮತ್ತು ಬ್ರೇಕ್ ವ್ಯಾನ್) ಬೋಗಿಗಳನ್ನು ಒಳಗೊಂಡಿರಲಿದೆ.
