ಸಮಗ್ರ ಸುದ್ದಿ

ಗುಣಮಟ್ಟವಲ್ಲದ ಔಷಧಿಗಳ ನಿಯಂತ್ರಣಕ್ಕಾಗಿ ವಿಶೇಷ  ಪೋರ್ಟಲ್ ಅಭಿವೃದ್ಧಿ: ಸಚಿವ ದಿನೇಶ್ ಗುಂಡೂರಾವ್

Share

ಬೆಂಗಳೂರು:ಗುಣಮಟ್ಟವಲ್ಲದ ಔಷಧಿಗಳನ್ನು ಪತ್ತೆಹಚ್ಚಲು ಮತ್ತು ನಿಯಂತ್ರಿಸಲು  ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆವತಿಯಿಂದ ವಿಶೇಷ ಪೋರ್ಟಲ್ ಅನ್ನು ಅಭಿವೃದ್ದಿ ಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಇಂದು ಆರೋಗ್ಯ ಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುಣಮಟ್ಟದ ಮಾನದಂಡವನ್ನು ಪೂರೈಸದ (ಎನ್ ಎಸ್ ಕ್ಯೂ) ಔಷಧಗಳನ್ನು ಮಾರುಕಟ್ಟೆಯಲ್ಲಿ ನಿಖರವಾಗಿ ಪತ್ತೆಹಚ್ಚಲು ಮತ್ತು  ಎನ್ ಡಿ ಪಿ ಎಸ್ ಔಷಧಗಳ ದುರುಪಯೋಗ ತಡೆಯಲು ಅಭಿವೃದ್ಧಿ ಪಡಿಸಿರುವ ಪೋರ್ಟಲ್ ಗೆ ಚಾಲನೆ ನೀಡಿದರು.

ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಈ ಪೋರ್ಟಲ್ ಮೂಲಕ ಸಗಟು ಮತ್ತು ಚಿಲ್ಲರೆ ಔಷಧಿ ಮಳಿಗೆಗಳಲ್ಲಿ ಲಭ್ಯವಿರುವ ಗುಣಮಟ್ಟದ ಮಾನದಂಡವನ್ನು ಪೂರೈಸದ ಔಷಧಿಗಳ ಬ್ಯಾಚ್ ಗಳನ್ನು ಪತ್ತೆ ಹಚ್ಚಲಾಗುತ್ತದೆ.  ಹೀಗೆ ಗುರುತಿಸಲಾದ ಔಷಧಿಗಳ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಲಾಗುವುದು ಎಂದರು.

ವಾರ್ಷಿಕವಾಗಿ 450 ಔಷಧಗಳು  ಸರಾಸರಿ ಪ್ರಮಾಣಿತ ಗುಣಮಟ್ಟವನ್ನು ಹೊಂದಿರುವುದಿಲ್ಲ. 2025-26ನೇ ಸಾಲಿನಲ್ಲಿ ರೂ.1.85 ಕೋಟಿ ಔಷಧಿಗಳನ್ನು ಹಿಂಪಡೆಯಲಾಗಿದೆ. ಗುಣಮಟ್ಟವಲ್ಲದ ಔಷಧಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ. ತಯಾರಕರು ಮತ್ತು ಸಗಟು ವ್ಯಾಪಾರಿಗಳಿಂದ ಇಂತಹ ಔಷಧಿಗಳು ಪತ್ತೆಯಾದರೆ ಆ ಔಷಧಿಗಳನ್ನು ಹಿಂಪಡೆಯಲಾಗುವುದು ಎಂದರು.

ಈ ಪೋರ್ಟಲ್ ಮುಖಾಂತರ ಇಲಾಖೆಗೆ ಲಭ್ಯವಿರುವ ಸ್ಟಾಕ್ ವಿವರಗಳು ಹಾಗೂ ಸರಬರಾಜುದಾರರಿಗೆ ಹಿಂತಿರುಗಿಸಿದ ಪ್ರಮಾಣದ ಮಾಹಿತಿಯನ್ನು ರಿಯಲ್ ಟೈಮ್ಸ್ ನಲ್ಲಿ ಒದಗಿಸುವ ಮೂಲಕ ಉತ್ತಮ ಮೇಲ್ವಿಚಾರಣೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಹಾಗಾಗಿ ಇದು ಸಾರ್ವಜನಿಕರಿಗೆ ಸುರಕ್ಷಿತ ಔಷಧಿಗಳನ್ನು ಖಚಿತಪಡಿಸುತ್ತದೆ ಎಂದರು.

ಎನ್ ಡಿಪಿಎಸ್ ಔಷಧಿಗಳ ದುರುಪಯೋಗ ತಡೆಗೆ ಕ್ರಮ:

ಇಲಾಖೆಯಿಂದ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಫಿಕ್ ಸಬ್ ಸ್ಟಾನ್ಸಸ್ ಔಷಧಿಗಳ ಮಾರಾಟದ ಮೇಲೆ ನಿಗವಹಿಸÀಲಾಗುತ್ತಿದೆ. ಅನಧಿಕೃತ ಬಳಕೆಯನ್ನು ತಡೆಯುವ ಉದ್ದೇಶದಿಂದ ಎಫ್ ಡಿಎ ಇಲಾಖೆ ಈ ಔಷಧಿಗಳ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸಿದೆ.

ಎನ್ ಡಿಪಿಎಸ್ ಔಷಧಿಗಳ ದುರುಪಯೋಗವನ್ನು ನಿಯಂತ್ರಿಸಲು ಈ ಇಲಾಖೆಯು ವಿಶೇಷ ಮಾನಿಟರಿಂಗ್ ಪೆÇೀರ್ಟಲ್ ಅನ್ನು ಪರಿಚಯಿಸಿದೆ.  ಈ ವ್ಯವಸ್ಥೆಯಿಂದ ಎನ್ ಡಿಪಿಎಸ್ ಔಷಧಿಗಳನ್ನು ವಿತರಿಸುವ ಸಂದರ್ಭದಲ್ಲಿ ರೋಗಿ ಮತ್ತು ವೈದ್ಯರ ಮಾಹಿತಿಯನ್ನು ಪಡೆಯುವ ಜೊತೆಗೆ ಸಲಹಾ ಚೀಟಿಯನ್ನು ಕಡ್ಡಾಯವಾಗಿ ಸಂಗ್ರಹಿಸಿ ಪರಿಶೀಲಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತರಾದ ಶ್ರೀನಿವಾಸ್, ಅಪರ ಔಷಧ ನಿಯಂತ್ರಕರಾದ ಉಮೇಶ್, ಉಪ ಔಷಧ ನಿಯಂತ್ರಕರಾದ ಕೆಂಪಯ್ಯ, ಸಹಾಯಕ ನಿರ್ದೇಶಕರಾದ ಗೋವಿಂದ ರಾಜು ಉಪಸ್ಥಿತರಿದ್ದರು.


Share

You cannot copy content of this page