ಸಮಗ್ರ ಸುದ್ದಿ

ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ|ಲಾಲ್‍ಬಾಗ್‍ನಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

Share

ಬೆಂಗಳೂರು :ಆಗಸ್ಟ್-2026ರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಸಿದ್ಧ ಲಾಲ್‍ಬಾಗ್ ಸಸ್ಯಶಾಸ್ತ್ರೀಯ ತೋಟದಲ್ಲಿ “ಶ್ರೀ ಗಂಗ ಸಾಮ್ರಾಜ್ಯ ವೈಭವ – ಕರ್ನಾಟಕದ ಮೊಟ್ಟ ಮೊದಲ ರಾಜವಂಶ” ಎಂಬ ವಿಷಯಾಧಾರಿತ 220ನೇ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್ 06 ರಿಂದ 17 ರವರೆಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಯುಕ್ತ ತೋಟಗಾರಿಕೆ ಇಲಾಖೆಯು ಸರ್ಕಾರಿ ಮತ್ತು ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು, ಸಾರ್ವಜನಿಕರು ಹಾಗೂ ಸಂಸ್ಥೆಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಾಗೂ ಇಲಾಖಾ ಮಳಿಗೆಗಳ ಹಂಚಿಕೆಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಮನೆ, ಕಛೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯ ಉದ್ಯಾನವನಗಳು, ತೋಟಗಳು, ತಾರಸಿ ಅಥವಾ ಕೈ ತೋಟಗಳು, ತರಕಾರಿ ಮತ್ತು ಔಷಧಿ ಗಿಡಗಳು, ಕುಂಡದಲ್ಲಿ ಬೆಳೆದ ಗಿಡಗಳು ಹಾಗೂ ಇಕೆಬಾನ, ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಆಸಕ್ತರು ಹಾಗೂ ಪ್ರದರ್ಶಕರು ಕಛೇರಿ ವೇಳೆಯಲ್ಲಿ, ಬೆಳಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ನಿಗದಿತ ಕಛೇರಿಗಳಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.

ಇಕೆಬಾನ, ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಮತ್ತು ಇತರೆ ಪೂರಕ ಕಲೆಗಳ ಸ್ಪರ್ಧೆ

ಈ ಸ್ಪರ್ಧೆಗೆ ಜುಲೈ 27 ರಿಂದ ಆಗಸ್ಟ್ 04 ರ ವರೆಗೆ ಅರ್ಜಿಗಳನ್ನು ವಿತರಿಸಲಾಗುವುದು. ಆಗಸ್ಟ್ 04 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಅರ್ಜಿಗಳನ್ನು ತೋಟಗಾರಿಕೆ ಅಪರ ನಿರ್ದೇಶಕರು (ಯೋಜನೆ), ಲಾಲ್‍ಬಾಗ್, ಬೆಂಗಳೂರು ಇಲ್ಲಿ ತಾರಕೇಶ್ವರಿ ಕೆ.ಆರ್. ಮೊಬೈಲ್ ಸಂ 8497048733 ಅಥವಾ ಪುಷ್ಪಲತಾ ಎಂ. ಮೊಬೈಲ್ ಸಂ. 8904592122 ಇವರನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು.

ವಿವಿಧ ಉದ್ಯಾನವನಗಳು, ತೋಟಗಳ ಸ್ಪರ್ಧೆ ಹಾಗೂ ಕುಂಡದಲ್ಲಿ ಬೆಳೆದ ಗಿಡಗಳ ಸ್ಪರ್ಧೆಗೆ ಜುಲೈ 27 ರಿಂದ ಆಗಸ್ಟ್ 04 ರ ವರೆಗೆ ಅರ್ಜಿಗಳನ್ನು ವಿತರಿಸಲಾಗುವುದು ಹಾಗೂ ಆಗಸ್ಟ್ 06 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಅರ್ಜಿಗಳನ್ನು ತೋಟಗಾರಿಕೆ ಅಪರ ನಿರ್ದೇಶಕರು (ತೋಟದ ಬೆಳೆಗಳು), ಲಾಲ್‍ಬಾಗ್, ಬೆಂಗಳೂರು ಕಛೇರಿ ಅಥವಾ ಆನ್‍ಲೈನ್ ವೆಬ್ ಸೈಟ್ ಮೂಲಕ  https://horticulturedir.karnataka.gov.in  ಅರ್ಜಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ್ ವೈ. ಸಿ. ಮೊಬೈಲ್ ಸಂಖ್ಯೆ. 9845549545 ಅಥವಾ ವಿನೋದ್ ರಾಯರ್ ಮೊಬೈಲ್ ಸಂಖ್ಯೆ. 9886819217 ಅಥವಾ ನವೀನ್ ಕುಮಾರ್, ಮೊಬೈಲ್ ಸಂಖ್ಯೆ 9844199867 ಗೆ ಸಂಪರ್ಕಿಸುವುದು.

ಇಲಾಖಾ ಮಳಿಗೆಗಳ ಹಂಚಿಕೆ ಜುಲೈ 27 ಮತ್ತು 28 ರಂದು ಅರ್ಜಿಗಳನ್ನು ವಿತರಿಸಲಾಗುವುದು. ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಅರ್ಜಿಗಳನ್ನು ತೋಟಗಾರಿಕೆ ಅಪರ ನಿರ್ದೇಶಕರು (ಉದ್ಯಾನವನಗಳು, ತೋಟಗಳು ಮತ್ತು ಪುಷ್ಪಾಭಿವೃದ್ಧಿ), ಲಾಲ್‍ಬಾಗ್, ಬೆಂಗಳೂರು ಕಛೇರಿ ಅಥವಾ. ವೆಬ್‍ಸೈಟ್‍  https://horticulturedir.karnataka.gov.in  ನಲ್ಲಿ ಅರ್ಜಿ ಪಡೆಯಬಹುದು.

ಹೆಚ್ಚಿನ ವಿವರಗಳಿಗಾಗಿ ಶ್ರೀಮತಿ ಸಕ್ಕುಬಾಯಿ, ಮೊಬೈಲ್ ಸಂಖ್ಯೆ. 8217377805 ಅಥವಾ ಚಿಕ್ಕಣ್ಣ ಗೌಡ, ಮೊಬೈಲ್ ಸಂಖ್ಯೆ. 9964763539 ಇವರನ್ನು ಸಂಪರ್ಕಿಸಬಹುದು ಎಂದು ಲಾಲ್‍ಬಾಗ್ ಸಸ್ಯತೋಟದ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page