ಸಮಗ್ರ ಸುದ್ದಿ

ನಿಯಮ ಪಾಲಿಸದ ಹೊಟೇಲ್ ಗಳಿಂದ ರೂ.1.60 ಲಕ್ಷ ದಂಡ ವಸೂಲಾತಿ

Share

ಬೆಂಗಳೂರು:ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ* ಬ್ಯಾಟರಾಯನಪುರ ಹಾಗೂ ಯಲಹಂಕ ವಿಭಾಗದ ಆರೋಗ್ಯ ವೈದ್ಯಾಧಿಕಾರಿ ಮತ್ತು ಅವರ ತಂಡವು ಇಂದು ವಿವಿಧ ಆಹಾರ ಮಳಿಗೆಗಳು ಹಾಗೂ ಹೋಟೆಲ್‌ಗಳಲ್ಲಿ ತಪಾಸಣೆಯನ್ನು ನಡೆಸಿ, ನಿಯಮ ಪಾಲಿಸದ 6 ಹೋಟೆಲ್ ಗಳಿಗೆ ರೂ.1.60 ಲಕ್ಷ ದಂಡ ವಿಧಿಸಿರುತ್ತಾರೆ.

** ತಪಾಸಣೆ ನಡೆಸಲಾದ ಹೋಟೆಲ್ ಹಾಗೂ ಕ್ರಮಗಳ ವಿವರ: **

Hyatt Centric: ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸದಿರುವುದು ಹಾಗೂ ನೊಣಗಳು ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ₹40,000 ದಂಡ ವಿಧಿಸಲಾಗಿದೆ.

Peepai Brewery & Kitchen: ಸ್ಟೋರ್ ರೂಮ್‌ನಲ್ಲಿ ಅವಧಿ ಮೀರಿದ ಅಡುಗೆ ಎಣ್ಣೆ ಪತ್ತೆಯಾಗಿದ್ದು, ಕೋಲ್ಡ್ ಸ್ಟೋರೇಜ್ ಘಟಕದಲ್ಲಿ ಸಂಗ್ರಹಿಸಿದ್ದ ಮಾಂಸವನ್ನು ಮುಚ್ಚದೇ ಹಾಗೂ ಲೇಬಲ್ ಮಾಡದೇ ಇಡಲಾಗಿತ್ತು. ಮಾಂಸ ಖರೀದಿಸಿದ ದಿನಾಂಕಕ್ಕೆ ಸಂಬಂಧಿಸಿದ ಇನ್‌ವಾಯ್ಸ್ ಲಭ್ಯವಿರಲಿಲ್ಲ. FSSAI ಹಾಗೂ ಘನ ತ್ಯಾಜ್ಯ ನಿರ್ವಹಣೆ (SWM) ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ₹80,000 ದಂಡ ವಿಧಿಸಲಾಗಿದೆ.

Thalassery Restaurant: ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸದಿರುವುದು, ನೊಣಗಳು ಕಂಡುಬಂದಿದ್ದು, ಅಶುಚಿಯಾದ ಸ್ಥಳ ಹಾಗೂ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ₹20,000 ದಂಡ ವಿಧಿಸಲಾಗಿದೆ.

Chickpete Donne Biriyani: ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸದಿರುವುದು, ನೊಣಗಳು ಕಂಡುಬಂದಿದ್ದು, ಅಶುಚಿಯಾದ ಸ್ಥಳ ಹಾಗೂ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ₹5,000 ದಂಡ ವಿಧಿಸಲಾಗಿದೆ.

Nandhana Palace: ತ್ಯಾಜ್ಯ ವಿಂಗಡಣೆಯಲ್ಲಿ ಲೋಪ, ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಹಾಗೂ ಅಶುಚಿಯಾದ ಸ್ಥಳ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ₹15,000 ದಂಡ ವಿಧಿಸಲಾಗಿದೆ.

Swathi Hotel: ಅನೈರ್ಮಲ್ಯಕರ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳ ಪಾಲನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬೆಂಗಳೂರು ಉತ್ತರ ನಗರ ಪಾಲಿಕೆಯ ವತಿಯಿಂದ ಮುಂದಿನ ದಿನಗಳಲ್ಲಿಯೂ ತಪಾಸಣೆ ಹಾಗೂ ಅಗತ್ಯ ಕ್ರಮಗಳನ್ನು ಮುಂದುವರಿಸಲಾಗುವುದು.


Share

You cannot copy content of this page