ಬೆಂಗಳೂರು:ರಾಜ್ಯದ ಸಮಸ್ತ ಜನರಿಗೆ ಹಾಗೂ ಎಲ್ಲಾ ಗ್ಯಾರಂಟಿ ಫಲಾನುಭವಿಗಳಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಯ ಮೂಲಕ ರಾಜ್ಯದ ಕೋಟ್ಯಂತರ ಮನೆಗಳಲ್ಲಿ ಬೆಳಕು ಮೂಡುತ್ತಿದೆ. ಇದೇ ಬೆಳಕಿನಲ್ಲಿ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ರಾಜ್ಯದ ಪ್ರತಿಯೊಂದು ಮನೆಯಲ್ಲೂ ಸುಖ, ಶಾಂತಿ, ನೆಮ್ಮದಿ ಹಾಗೂ ಸಂತೋಷದ ಬೆಳಕು ತುಂಬಲಿ. ಎಲ್ಲ ಕುಟುಂಬಗಳಲ್ಲಿ ಸಂತಸ ಹಾಗೂ ನೆಮ್ಮದಿ ನೆಲೆಸಲಿ ಎಂದು ಹಾರೈಸಿದರು.
ಹಬ್ಬಗಳು ನಾಡಿನ ಪ್ರತಿಯೊಂದು ಕುಟುಂಬಕ್ಕೂ ಹೊಸ ಭರವಸೆ. ಗೌರಿ- ಗಣೇಶ ಹಬ್ಬ ಒಂದೇ ದಿನ ಬಂದಿದೆ. ವಿಘ್ನ ವಿನಾಯಕನ ಆಶೀರ್ವಾದದಿಂದ ಜನರ ಸಂಕಷ್ಟಗಳು ದೂರವಾಗಿ, ಸುಖ- ಶಾಂತಿ ನೆಲೆಸಲಿ. ಗಣೇಶನಗಿಂತ ಮೊದಲು ಗೌರಿಯನ್ನು ಪೂಜಿಸುತ್ತೇವೆ. ಗೌರಿ ಸಮಾನರಾದ ಎಲ್ಲಾ ತಾಯಂದಿರಿಗೂ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
