ಅನ್ಯ ರಾಜ್ಯಗಳಿಗೆ ನಮ್ಮ ಕ್ರೀಡಾಪಟುಗಳು ವಲಸೆ ಹೋಗಬಾರದು ಎಂಬುದೇ ನಮ್ಮ ಉದ್ದೇಶ
ಬೆಂಗಳೂರು:ಕರ್ನಾಟಕದ ಕ್ರೀಡಾಪಟುಗಳು ಹೊರ ರಾಜ್ಯಗಳಿಗೆ ವಲಸೆ ಹೋಗಬಾರದು ಎಂಬ ಉದ್ದೇಶದಿಂದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಸಹಕಾರ ನೀಡುತ್ತಿದೆ. ಕ್ರೀಡಾಪಟುಗಳಿಗೆ ಉದ್ಯೋಗ ಖಾತ್ರಿಯನ್ನು ನೀಡಲಾಗಿದೆ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಕೆ.ಗೋವಿಂದರಾಜ್ ಹೇಳಿದರು.
ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಶನಿವಾರ ನಡೆದ 5ನೇ ಮಿನಿ ಕರ್ನಾಟಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಉದ್ಯೋಗದಲ್ಲಿ ಶೇಕಡ 2 ರಷ್ಟು, ಅರಣ್ಯ ಮತ್ತು ಪೊಲೀಸ್ ಇಲಾಖೆಯಲ್ಲಿ ಶೇಕಡ 3% ಮೀಸಲಾತಿ ಕಲ್ಪಿಸಲಾಗಿದೆ ಎಂದರು.
ಯುವ ಕ್ರೀಡಾಪಟುಗಳೇ ನಮ್ಮ ದೇಶದ ಭವಿಷ್ಯ,ಈ ಉದ್ದೇಶದಿಂದಲೇ ಮಿನಿ ಕರ್ನಾಟಕ ಕ್ರೀಡಾಕೂಟದ ಆರಂಭಿಸಲಾಯಿತು. ಭಾರತದಲ್ಲಿ ಮೊದಲ ಬಾರಿಗೆ 14 ವಯೋಮಿತಿ ವಿಭಾಗದ ಕ್ರೀಡಾಕೂಟ ನಡೆಸಿಕೊಂಡು ಬರೆಯಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸುವುದೇ ಕಷ್ಟ, ಇಂಥ ಪರಿಸ್ಥಿತಿಯಲ್ಲೂ ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು ಎಂದು ಡಾ.ಕೆ.ಗೋವಿಂದರಾಜ್ ಹೇಳಿದರು.
ಮಿನಿ ಕರ್ನಾಟಕ ಕ್ರೀಡಾಕೂಟಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಮಕ್ಕಳು ಬಂದರು. ಇದಕ್ಕೆ ಸಹಕಾರ ನೀಡಿದ ಪಾಲಕರಿಗೆ ವಿಶೇಷ ಅಭಿನಂದನೆಗಳು, ಕ್ರೀಡೆ ಜೊತೆಗೆ ಓದಿನ ಕಡೆಗೂ ಮಕ್ಕಳು ಗಮನಹರಿಸಬೇಕು ಎಂದು ಡಾ.ಕೆ.ಗೋವಿಂದರಾಜ್ ಕಿವಿ ಮಾತು ಹೇಳಿದರು.
ಕರ್ನಾಟಕದಲ್ಲಿ ಈಗಾಗಲೇ 12 ಕ್ರೀಡಾಪಟುಗಳಿಗೆ ಗ್ರೂಪ್ ಬಿ ಹುದ್ದೆ ನೀಡಲಾಗಿದೆ. ನಮ್ಮ ಕ್ರೀಡಾಪಟುಗಳು ಹೊರ ರಾಜ್ಯಕ್ಕೆ ವಲಸೆ ಹೋಗಬಾರದು ಎಂಬುದೇ ಇದರ ಉದ್ದೇಶ. ಕ್ರೀಡಾಪಟುಗಳಿಗೆ ಶೇಕಡ 25% ಹಾಜರಾತಿ, ಐದು ಅಂಕ ಮಾರ್ಕ್ಸ್ ಗ್ರೇಸ್ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತಿದೆ. ಇದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದರು.
