ಸಮಗ್ರ ಸುದ್ದಿ

ಹುಬ್ಬಳ್ಳಿ-ಯಶವಂತಪುರ, ಯಶವಂತಪುರ-ವಿಜಯಪುರ ನಡುವೆ ಏಕಮುಖ ಎಕ್ಸ್ ಪ್ರೆಸ್ ರೈಲು

Share

ಬೆಂಗಳೂರು : ಮುಂಬರುವ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ನೈಋತ್ಯ ರೈಲ್ವೆಯು 2025 ರ ಡಿಸೆಂಬರ್ 24 ರಂದು ಎರಡು ಏಕಮುಖ (ಒನ್-ವೇ) ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲಿದೆ.

ಹುಬ್ಬಳ್ಳಿ-ಯಶವಂತಪುರ ವಿಶೇಷ ರೈಲು:

ರೈಲು ಸಂಖ್ಯೆ 07379 ಎಸ್ಎಸ್ಎಸ್ ಹುಬ್ಬಳ್ಳಿ–ಯಶವಂತಪುರ ಏಕಮುಖ ವಿಶೇಷ ಎಕ್ಸ್ ಪ್ರೆಸ್ ರೈಲು, ಡಿಸೆಂಬರ್ 24 ರಂದು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿದೆ. ಅದೇ ದಿನ ರಾತ್ರಿ 8:30 ಗಂಟೆಗೆ ಯಶವಂತಪುರ ತಲುಪಲಿದೆ. ಈ ರೈಲು ಸಂಚಾರದ ಅವಧಿಯಲ್ಲಿ ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಹಾಗೂ ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈ ವಿಶೇಷ ಸೇವೆಯು ಹವಾನಿಯಂತ್ರಿತ (ಎಸಿ) ಬೋಗಿಗಳು, ಸ್ಲೀಪರ್ ದರ್ಜೆ, ಸಾಮಾನ್ಯ ದ್ವಿತೀಯ ದರ್ಜೆ, ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಮತ್ತು ಜನರೇಟರ್ ಕಾರ್’ಗಳು ಸೇರಿದಂತೆ ಒಟ್ಟು 16 ಬೋಗಿಗಳೊಂದಿಗೆ ಸಂಚರಿಸಲಿದೆ.

ಯಶವಂತಪುರ-ವಿಜಯಪುರ ವಿಶೇಷ ರೈಲು:

ಡಿಸೆಂಬರ್ 24 ರಂದು ಕಾರ್ಯನಿರ್ವಹಿಸಲಿರುವ ರೈಲು ಸಂಖ್ಯೆ 06277 ಯಶವಂತಪುರ–ವಿಜಯಪುರ ಏಕಮುಖ ವಿಶೇಷ ಎಕ್ಸ್ ಪ್ರೆಸ್ ರೈಲು ರಾತ್ರಿ 9:50ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 9 ಗಂಟೆಗೆ ವಿಜಯಪುರವನ್ನು ತಲುಪಲಿದೆ. ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಹರಿಹರ, ಬದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಈ ರೈಲು ಕೂಡ ಮೇಲಿನ ರೈಲು (07379 ಹುಬ್ಬಳ್ಳಿ-ಯಶವಂತಪುರ) ಸೇವೆಯಂತೆಯೇ 16 ಬೋಗಿಗಳೊಂದಿಗೆ ಚಲಿಸಲಿದೆ.


Share

You cannot copy content of this page