ಸಮಗ್ರ ಸುದ್ದಿ

ಆಸ್ತಿ ತೆರಿಗೆ ಪಾವತಿಸದೇ ಇರುವ ವಾಣಿಜ್ಯ ಬಳಕೆ ಕಟ್ಟಡಗಳನ್ನು ಸೀಲಿಂಗ್ ಮಾಡುವ ಮೂಲಕ ತೆರಿಗೆ ವಸೂಲಾತಿಗೆ ಆದ್ಯತೆ:ಡಿ.ಎಸ್.ರಮೇಶ್

Share

ಬೆಂಗಳೂರು : ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಆಯುಕ್ತರಾದ ಡಿ.ಎಸ್.ರಮೇಶ್ ರವರ ಮಾರ್ಗದರ್ಶನದಂತೆ ಬಹು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಸುಸ್ಥಿದಾರರಾಗಿರುವ ವಸತಿಯೇತರ ಬಳಕೆಯ ಬ್ಯಾಂಕ್, ಹೋಟೆಲ್, ವಾಣಿಜ್ಯ ಸಂಕೀರ್ಣ ಆಸ್ತಿಗಳನ್ನು ಸೀಲಿಂಗ್ ಮಾಡುವ ಮೂಲಕ ಬಾಕಿದಾರರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಲಾಯಿತು.

ಆಸ್ತಿ ತೆರಿಗೆ ವಸೂಲಾತಿಗೆ ಸೀಲಿಂಗ್ ಮೂಲಕ ಕಾರ್ಯಾಚರಣೆ:

ಒಂದು ಮತ್ತು ಅದಕ್ಕಿಂತಲೂ ಹೆಚ್ಚಿನ ವರ್ಷಗಳ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳಿಗೆ ನಿಯಮಾನುಸಾರ ಈಗಾಗಲೇ ನೋಟಿಸ್ ನೀಡಿ ಸಾಕಷ್ಟು ಸಮಯಾವಕಾಶ ನೀಡಿದ್ದರೂ ಸಹಾ, ಆಸ್ತಿ ತೆರಿಗೆ ಪಾವತಿಸಿರುವುದಿಲ್ಲ.ಅಂತಹ ಸ್ವತ್ತುಗಳನ್ನು ವಲಯ ಜಂಟಿ ಆಯುಕ್ತರಾದ ಡಾ.ದಾಕ್ಷಾಯಿಣಿ.ಕೆ. ರವರ ನೇತೃತ್ವದಲ್ಲಿ ತಂಡ ರಚಿಸಿ ಉಪ ವಿಭಾಗವಾರು ಅತಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಸ್ವತ್ತುಗಳನ್ನು ಸೀಲಿಂಗ್ ಮಾಡುವ ಮೂಲಕ ತೆರಿಗೆ ವಸೂಲಾತಿಗೆ ಆದ್ಯತೆ ನೀಡಲಾಯಿತು ಎಂದು ಆಯುಕ್ತರು ತಿಳಿಸಿದರು.

ಸೀಲಿಂಗ್ ಮಾಡಲಾದ ಆಸ್ತಿಗಳ ವಿವರಗಳು:
ಶಾಮಣ್ಣ, 72/1, ಬೆಳ್ಳಂದೂರು ಗ್ರಾಮ, ಔಟರ್ ರಿಂಗ್ ರೋಡ್, ಬೆಂಗಳೂರು, ಎನ್. ದಸ್ತಗಿರಿ ಸಾಬ್
131, ಮಾರ್ಗೋಸಾ ಅವೆನ್ಯೂ, ಜಿ.ಜಿ.ಎಲ್., ಬೆಳ್ಳಂದೂರು ಗ್ರಾಮ, ವಿ. ನಾರಾಯಣಪ್ಪ, 34, ರಿಂಗ್ ರೋಡ್, ಬೆಳ್ಳಂದೂರು ಗ್ರಾಮ, ಬೆಂಗಳೂರು, ಎನ್. ಲಿಂಗಾರೆಡ್ಡಿ
ನಂ.74/1, ಔಟರ್ ರಿಂಗ್ ರೋಡ್, ಬೆಳ್ಳಂದೂರು ಗ್ರಾಮ, ಕೆ.ಎಂ. ಅಣ್ಣಯ್ಯಪ್ಪ, ಡಿ. ಯಲ್ಲಪ್ಪ ಹಾಗೂ ಕೆ.ಎಂ. ಮುನಿಯಪ್ಪ, ಸೈಟ್ ನಂ.2, ಕೈಗೊಂಡರ ಹಳ್ಳಿ ಗ್ರಾಮ, ಎನ್. ದಸ್ತಗಿರಿ ಸಾಬ್, 113ಎ, ಜಿ.ಜಿ.ಎಲ್., ಬೆಳ್ಳಂದೂರು ಗ್ರಾಮ, ಬೆಂಗಳೂರು, ಕೆ.ಆರ್. ಅನಂತ್ ಕುಮಾರ್
ಕೈಕೊಂಡರಹಳ್ಳಿ ಗ್ರಾಮ, ಶ್ರೀಧರ್ ಪಂಪಾಟಿ
ನಂ. 8/8/2-10, ತೃತೀಯ ಮಹಡಿ, ಅಂಬಲಿಪುರ ಗ್ರಾಮ ಜಾಗೂ ಮಂಜುಳಾ ಸಿ, ನಂ.79/7, ಬೆಳ್ಳಂದೂರು ಗ್ರಾಮ, ಬೆಂಗಳೂರು.

ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ನಗರ ಪಾಲಿಕೆ ಆಯುಕ್ತರು ತಿಳಿಸಿದ್ದು, ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಆಸ್ತಿ ತೆರಿಗೆ ಪಾವತಿಸುವಂತೆ ಈ ಮೂಲಕ ಮನವಿ ಮಾಡಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿ ಪರಿಶೀಲನಾ ಸಭೆ:

ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರ ಅಧ್ಯಕ್ಷತೆಯಲ್ಲಿ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷಾ–75 ಯೋಜನೆಯಡಿ ಪ್ರಮುಖ ಜಂಕ್ಷನ್ ಅಭಿವೃದ್ಧಿ ಕುರಿತು ಪರಿಶೀಲನಾ ಸಭೆಯನ್ನು ಇಂದು ನಡೆಸಲಾಯಿತು.

ಸಭೆಯಲ್ಲಿ ಚರ್ಚಿಸಿಲಾದ ವಿಷಯಗಳು:

ಮಾರತಹಳ್ಳಿ, ವರ್ತೂರು ಕೋಡಿ, ಬಾಗ್ಮನೆ ಟೆಕ್ ಪಾರ್ಕ್, ಕುಂದಲಹಳ್ಳಿ, ಹೊರ ವರ್ತುಲ ರಸ್ತೆ–ಎಂಬಸಿ ಟೆಕ್ ವಿಲೇಜ್ ಹಾಗೂ ಸರ್ಜಾಪುರ ಜಂಕ್ಷನ್ ಗಳ ಸಮಗ್ರ ಅಭಿವೃದ್ಧಿ ಹಾಗೂ ಕಾಮಗಾರಿ ವೇಗ ನೀಡಲು ಸೂಚಿಸಲಾಯಿತು.

ಹೊರ ವರ್ತುಲ ರಸ್ತೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಸಮಗ್ರ ಅಭಿವೃದ್ಧಿ ಪಡಿಸಿ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೊರ ವರ್ತುಲ ರಸ್ತೆಯಲ್ಲಿರು ಫ್ಲೈಓವರ್ ಮತ್ತು ಅಂಡರ್‌ಪಾಸ್ ಸಮೀಪದ ಪಾದಚಾರಿ ಮಾರ್ಗದ ಅತಿಕ್ರಮಣವನ್ನು ತೆರವುಗೊಳಿಸಲು ಮೈಕ್ರೋಪ್ಲಾನ್ ಸಿದ್ದತೆ ಮಾಡಿಕೊಂಡು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಪರಿತ್ಯಾಜನ ಪತ್ರ (ಆರ್.ಡಿ) ಆಗಿರುವ ಸ್ವತ್ತುಗಳ ಅತಿಕ್ರಮಣ ತೆರವುಗೊಳಿಸಿ ಕೂಡಲೇ ನಗರ ಪಾಲಿಕೆ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದರು.

ಪಿ.ಜಿ ತಪಾಸಣೆ:

ಅಪರ ಆಯುಕ್ತರು (ಕಂದಾಯ) ಪ್ರಜ್ಞಾ ಅಮ್ಮೆಂಬಳ ರವರು ಕಾಡುಗೋಡಿಯ ವ್ಯಾಪ್ತಿಯಲ್ಲಿರುವ ವೈಟ್ ರೋಸ್ ಲೇಔಟ್, ಎ.ಎಲ್ ಕೋ ಲಿವಿಂಗ್ ಪಿ.ಜಿಯಲ್ಲಿ ತಪಾಸಣೆ ನಡೆಸಿದರು. ತಪಾಸಣೆ ವೇಳೆಯಲ್ಲಿ ಉದ್ದಿಮೆ ಪರವಾನಗಿ ನವೀಕರಣ ಮಾಡದೇ ಪಿ.ಜಿ ಕಾರ್ಯಾಚರಣೆ ನಡೆಸುತ್ತಿರುವುದು ಕಂಡುಬಂದಿದ್ದು, ಪಿ.ಜಿ. ಉಪಹಾರ ಗೃಹದಲ್ಲಿ ಸ್ವಚ್ಚತೆ ಕಾಪಾಡದೇ ಇರುವುದರಿಂದ ನಿಯಮಾನುಸಾರ ₹50,000 ದಂಡ ವಿಧಿಸಲಾಯಿತು ಎಂದು ಅಪರ ಆಯುಕ್ತರು ತಿಳಿಸಿದರು. ಈ ತಪಾಸಣೆಯಲ್ಲಿ ವೈದ್ಯಾಧಿಕಾರಿ ಹಾಗೂ ಆರೋಗ್ಯ ಮೇಲ್ವಿಚಾರಕರು ಹಾಜರಿದ್ದರು.

ಸಭೆಯಲ್ಲಿ ಮುಖ್ಯ ಅಭಿಯಂತರರಾದ ಕೃಷ್ಣಮೂರ್ತಿ, ಕಾರ್ಯನಿರ್ವಾಹಕ ಅಭಿಯಂತರು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಭಾಗವಹಿಸಿದ್ದರು.


Share

You cannot copy content of this page