ಸಮಗ್ರ ಸುದ್ದಿ

ಜಲಮಂಡಳಿಯ ‘ಬ್ಲೂ ಫೋರ್ಸ್’ ಭರ್ಜರಿ ಕಾರ್ಯಾಚರಣೆ: ಒಂದೇ ತಿಂಗಳಲ್ಲಿ 4,000ಕ್ಕೂ ಹೆಚ್ಚು ಸ್ಥಳಗಳ ತಪಾಸಣೆ; ಅಕ್ರಮ ಸಂಪರ್ಕಗಳ ವಿರುದ್ಧ ಸಮರ

Share

ಬೆಂಗಳೂರು : ಅಕ್ರಮ ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ಪತ್ತೆಹಚ್ಚಲು ಬೆಂಗಳೂರು ಜಲಮಂಡಳಿ ರಚಿಸಿರುವ ವಿಶೇಷ ಕಾರ್ಯಪಡೆ ‘ಬ್ಲೂ ಫೋರ್ಸ್’ (Blue Force), ಕಳೆದ ಒಂದು ತಿಂಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ನಗರದಾದ್ಯಂತ ಬರೋಬ್ಬರಿ 4,000ಕ್ಕೂ ಹೆಚ್ಚು ಕಟ್ಟಡಗಳು ಮತ್ತು ಸ್ಥಳಗಳನ್ನು ತಪಾಸಣೆ ನಡೆಸಿರುವ ಪಡೆ, ನೂರಾರು ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಿ ಬಿಸಿ ಮುಟ್ಟಿಸಿದೆ.

ಒಂದೇ ದಿನ 70 ಸಂಪರ್ಕ ಕಡಿತ:

ದತ್ತಾಂಶಗಳ ಪ್ರಕಾರ, ಡಿಸೆಂಬರ್ 20 ರಂದು ಒಂದೇ ದಿನ ಬ್ಲೂ ಫೋರ್ಸ್ ತಂಡಗಳು ನಗರದ ನಾಲ್ಕು ವಲಯಗಳಲ್ಲಿ 237 ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸಿವೆ. ಈ ವೇಳೆ ಅಕ್ರಮವಾಗಿ ನೀರು ಬಳಸುತ್ತಿದ್ದ 70 ಸಂಪರ್ಕಗಳನ್ನು ಸ್ಥಳದಲ್ಲೇ ಕಡಿತಗೊಳಿಸಲಾಗಿದೆ.

ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಕಾರ್ಯಾಚರಣೆ ನಡೆದಿದ್ದು, 61 ಕಟ್ಟಡಗಳ ತಪಾಸಣೆ ನಡೆಸಿ 33 ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.

ಪೂರ್ವ ವಲಯ 18 ಸಂಪರ್ಕ ಕಡಿತ,ಪಶ್ಚಿಮ ವಲಯ15 ಸಂಪರ್ಕ ಕಡಿತ, ಉತ್ತರ ವಲಯ 4 ಸಂಪರ್ಕ ಕಡಿತ ಗೊಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್, ನೀರು ಕಳ್ಳತನ ಮತ್ತು ಅನಧಿಕೃತ ಸಂಪರ್ಕಗಳಿಂದ ಮಂಡಳಿಗೆ ಆಗುತ್ತಿರುವ ಆದಾಯ ಸೋರಿಕೆ ತಡೆಗಟ್ಟಲು ಬ್ಲೂ ಫೋರ್ಸ್ ಹಗಲಿರುಳು ಶ್ರಮಿಸುತ್ತಿದೆ. 4,000 ತಪಾಸಣೆಗಳು ಕೇವಲ ಆರಂಭವಷ್ಟೇ. ಅಕ್ರಮ ಸಂಪರ್ಕ ಹೊಂದಿರುವವರು ಕೂಡಲೇ ಸಕ್ರಮಗೊಳಿಸಿಕೊಳ್ಳಬೇಕು, ಇಲ್ಲದಿದ್ದರೆ ದಂಡ ಮತ್ತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


Share

You cannot copy content of this page