ಸಮಗ್ರ ಸುದ್ದಿ

ಡಿಸೆಂಬರ್ 8 ರಿಂದ ಚಳಿಗಾಲದ ಅಧಿವೇಶನ

Share

ಬೆಂಗಳೂರು, ನ.15:

ಹದಿನಾರನೇ ವಿಧಾನಸಭೆಯ ಎಂಟನೇ ಅಧೀವೇಶನವು ಡಿಸೆಂಬರ್ 8 ರಂದು ಪೂರ್ವಾಹ್ನ 11.00 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ.

ಡಿಸೆಂಬರ್ 8 ರಿಂದ 10, 12, 15 ರಿಂದ 17 ಮತ್ತು 19 ರಂದು ಸರ್ಕಾರಿ ಕಾರ್ಯಕಲಾಪಗಳು ಜರುಗಲಿವೆ. ಡಿಸೆಂಬರ್ 11 ಮತ್ತು 18 ರಂದು ಸರ್ಕಾರಿ ಮತ್ತು ಖಾಸಗಿ ಕಾರ್ಯಕಲಾಪಗಳು ಜರುಗಲಿವೆ. ಡಿಸೆಂಬರ್ 13 ಎರಡನೇ ಶನಿವಾರ ಮತ್ತು ಡಿಸೆಂಬರ್ 14 ಭಾನುವಾರದಂದು ಸಾರ್ವತ್ರಿಕ ರಜೆ ಇರುವುದರಿಂದ ಕಲಾಪಗಳು ಇರುವುದಿಲ್ಲ ಎಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಶ್ರೀಮತಿ ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page