ಸಿನಿಮಾ

ಬಿಗ್‌ಬಾಸ್ ಗೆದ್ದ ಗಿಲ್ಲಿ ನಟ, ರನ್ನ‌ರ್ ಅಪ್ ಆದ ರಕ್ಷಿತಾ ಶೆಟ್ಟಿ

Share

ಬೆಂಗಳೂರು: ಕನ್ನಡದ ಬಿಗ್‌ ಬಾಸ್ ಸೀಸನ್ 12ರ ಸ್ಪರ್ಧಿಯಾದ ಗಿಲ್ಲಿನಟ ಅವರು ತೀವ್ರ ಪೈಪೋಟಿ ನಡುವೆ ಬಿಗ್ ಬಾಸ್ ವಿಜೇತರಾಗಿದ್ದಾರೆ. ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ 12ರ ವಿಜೇತರ ಹೆಸರನ್ನು ಪೋಷಿಸಿದರು.

ಸುಮಾರು 37 ಕೋಟಿಗೂ ಅಧಿಕ ವೋಟ್‌ಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ಅವರು ಈ ಬಾರಿಯ ಬಿಗ್‌ಬಾಸ್ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿದ್ದಾರೆ.

ಈ ಬಾರಿ ಟಾಪ್ 5 ಸ್ಥಾನದಲ್ಲಿ ಕಾವ್ಯ, ರಘು, ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ರಕ್ಷಿತಾ ಇದ್ದರು. ಈ ಟಾಪ್ 5 ಫೈನಲಿಸ್ಟ್‌ಗಳ ಪೈಕಿ ಗಿಲ್ಲಿ ನಟ ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಅಂತಿಮವಾಗಿ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಇಬ್ಬರ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು.

ಕೊನೆಗೂ ಗಿಲ್ಲಿ ನಟ ಬಿಗ್‌ಬಾಸ್ ಗೆದ್ದು ಬೀಗಿದ್ದಾರೆ. ಇನ್ನು, ಗಿಲ್ಲಿ ನಟ ಅವರು ಟ್ರೋಫಿಯೊಂದಿಗೆ ರೂ.50 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಕಾಮಿಡಿ ಮೂಲಕವೇ ವೀಕ್ಷಕರ ಮನಸ್ಸನ್ನು ಸೆಳೆದಿದ್ದಾರೆ. ಕೊನೆಯದಾಗಿ ಸೀಸನ್ 12 ಬಿಗ್‌ಬಾಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದರ ಜೊತೆಗೆ ಕಿಚ್ಚ ಸುದೀಪ್ ಅವರು ವೈಯುಕ್ತಿಕವಾಗಿ ರೂ. 10 ಲಕ್ಷ ಕೊಡುವುದಾಗಿ ವೇದಿಕೆ ಮೇಲೆ ಘೋಷಿಸಿದರು.

ಬಿಗ್ ಬಾಸ್ ಮನೆ ಹೊರಗಡೆ ಸಾವಿರಾರು ಅಭಿಮಾನಿಗಳು ಗಿಲ್ಲಿ ನಟ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.


Share

You cannot copy content of this page