ಸಮಗ್ರ ಸುದ್ದಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಕೇರ್ ಬೈ ಬಿಎಲ್‌ಆರ್’ ಪ್ರಾರಂಭ|ವಿಮಾನ ನಿಲ್ದಾಣದ ಅನುಭವವನ್ನು ಮರುವ್ಯಾಖ್ಯಾನಿಸುವ ವೈಯಕ್ತೀಕರಿಸಿದ ಪ್ರಯಾಣಿಕ ಸೇವಾ ಬ್ರ್ಯಾಂಡ್ ಪ್ರಾರಂಭ

Share

ಬೆಂಗಳೂರು:ಇಂದಿನ ದಿನಗಳಲ್ಲಿ ವಿಮಾನ ನಿಲ್ದಾಣಗಳು ಕೇವಲ ಪ್ರಯಾಣದ ತಾಣಗಳಾಗಿ ಉಳಿದಿಲ್ಲ; ಬದಲಾಗಿ ಜನರು ಭೇಟಿಯಾಗುವ, ಕೆಲಸ ಮಾಡುವ, ಖರೀದಿ ಮಾಡುವ ಮತ್ತು ವಿಶ್ರಾಂತಿ ಪಡೆಯುವಂತಹ ತಾಣಗಳಾಗಿ ಹಾಗೂ ಸಾಮಾಜಿಕ ಕೇಂದ್ರಗಳಾಗಿ ವಿಕಸನಗೊಂಡಿವೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಕಾರ್ಯಾಚರಣೆಯ ದಕ್ಷತೆ ಮತ್ತು ಸುಲಭ ಪ್ರಯಾಣದ ಜೊತೆಗೆ ಮಾನವೀಯ ಕಾಳಜಿಯ ಅಂಶವನ್ನು ಬೆರೆಸಿ, ಪ್ರಯಾಣಿಕರ ಅನುಭವವನ್ನು ಉತ್ತಮ ಹಾಗೂ ಪ್ರಯಾಣವನ್ನು ಸ್ಮರಣೀಯಗೊಳಿಸಲು ಸದಾ ಬದ್ಧವಿದೆ.
ಈ ನಿಟ್ಟಿನಲ್ಲಿ ‘ಕೇರ್ ಬೈ ಬಿಎಲ್ಆರ್’ ಎಂಬ ವೈಯಕ್ತಿಕಗೊಳಿಸಿದ ಪ್ರಯಾಣಿಕ ಸೇವಾ ಬ್ರ್ಯಾಂಡ್‌ನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರಾರಂಭಿಸಿದೆ.

ಇಂದಿನ ಆಧುನಿಕ ಪ್ರಯಾಣಿಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಈ ಸೌಲಭ್ಯಗಳು, ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಮತ್ತು ವಿಮಾನ ನಿಲ್ದಾಣದ ಒಳಗೆ ಸುಲಭವಾಗಿ ಸಂಚರಿಸಲು ನೆರವಾಗುವ ಸಮಗ್ರ ನೆರವು ಮತ್ತು ಪ್ರೀಮಿಯಂ ಬೆಂಬಲ ಸೇವೆಗಳನ್ನು ಒದಗಿಸುತ್ತವೆ. ಸುಗಮ ಮಾರ್ಗದರ್ಶನದಿಂದ ಹಿಡಿದು ಸಂಪೂರ್ಣ ಬೆಂಬಲದವರೆಗೆ, ಈ ಸೇವೆಗಳು ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡರಲ್ಲೂ ಲಭ್ಯವಿವೆ.

‘ಕೇರ್ ಬೈ ಬಿಎಲ್ಆರ್’ ಅಡಿಯಲ್ಲಿ ಭೇಟಿ ಮತ್ತು ಸಹಾಯ (ಮೀಟ್‌ ಅಂಡ್‌ ಅಸಿಸ್ಟ್), ಪೋರ್ಟರ್ ಮತ್ತು ಲಗೇಜ್ ಸೇವೆ, ವ್ಯಾಲೆಟ್ ಪಾರ್ಕಿಂಗ್, ಐಷಾರಾಮಿ ಲಿಮೋಸಿನ್, ಆಗಮನ ಲೌಂಜ್ ಪ್ರವೇಶ, ಹೂಗುಚ್ಛ ಸೇವೆಗಳು ಸೇರಿದಂತೆ ಇನ್ನಿತರ ಸೌಲಭ್ಯಗಳು ಲಭ್ಯವಿದ್ದು, ಇವುಗಳನ್ನು ನಿರ್ಗಮನ, ಆಗಮನ ಮತ್ತು ಟ್ರಾನ್ಸಿಟ್ ಅವಧಿಗಳಲ್ಲಿ ಬಳಸಿಕೊಳ್ಳಬಹುದಾಗಿದೆ.

ಪ್ರಯಾಣದ ಪ್ರತಿ ಹಂತದಲ್ಲೂ ಪ್ರಯಾಣಿಕರಿಗೆ ನೆರವಾಗುವಂತೆ ಈ ಸೇವೆಗಳನ್ನು ರೂಪಿಸಲಾಗಿದ್ದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಮೂಲಕ ಪ್ರಯಾಣಿಸುವುದನ್ನು ಇನ್ನಷ್ಟು ಸುಗಮ, ಅನುಕೂಲಕರ ಮತ್ತು ಸ್ಮರಣೀಯವಾಗಿಸಲಿವೆ.
ಈ ಸೇವೆಗಳು ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡರಲ್ಲೂ ಲಭ್ಯವಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನೆರವು ನೀಡಲಿವೆ.

ವಿಮಾನಗಳ ವೇಳಾಪಟ್ಟಿಗೆ ಅನುಗುಣವಾಗಿ ಈ ಸೇವೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ಪ್ರಯಾಣಿಕರು ಇವುಗಳನ್ನು ಪಲ್ಸ್ ಆ್ಯಪ್ (Pulse App) ಅಥವಾ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಅಧಿಕೃತ ಜಾಲತಾಣದ www.bengaluruairport.com/carebyblr ಮೂಲಕ ಅಥವಾ ಎರಡು ಟರ್ಮಿನಲ್‌ಗಳಲ್ಲಿರುವ ನಿರ್ದಿಷ್ಟ ‘ಕೇರ್ ಬೈ ಬಿಎಲ್ಆರ್’ ಕೌಂಟರ್‌ಗಳಲ್ಲಿ ಕಾಯ್ದಿರಿಸಬಹುದಾಗಿದೆ. ಪ್ರತಿ ಕೌಂಟರ್‌ನಲ್ಲಿ ನುರಿತ ಗ್ರಾಹಕ ಸೇವಾ ವೃತ್ತಿಪರರು ಇರಲಿದ್ದು, ಪ್ರಯಾಣದುದ್ದಕ್ಕೂ ಅಗತ್ಯವಿರುವ ವೈಯಕ್ತಿಕ ಮತ್ತು ಸ್ಥಳೀಯ ಬೆಂಬಲವನ್ನು ಇವರು ಒದಗಿಸಲಿದ್ದಾರೆ.

ಈ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ವಾಣಿಜ್ಯ ಅಧಿಕಾರಿ ಕೆನ್ನೆತ್ ಆರ್. ಗುಲ್ಡ್ಜ್‌ಬರ್ಗ್ ಅವರು, ಇಂದಿನ ಪ್ರಯಾಣಿಕರು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವುದನ್ನು ಮಾತ್ರ ಬಯಸುವುದಿಲ್ಲ; ಬದಲಾಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಷಣದಿಂದಲೇ ವಿಶೇಷ ಕಾಳಜಿ, ಬೆಂಬಲ ಮತ್ತು ಆತಿಥ್ಯವನ್ನು ಅವರು ನಿರೀಕ್ಷಿಸುತ್ತಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣದ ಅನುಭವವು ಹಲವು ಹಂತಗಳಲ್ಲಿ ರೂಪುಗೊಳ್ಳುತ್ತದೆ ಎಂದು ಹೇಳಿದ್ದಾರೆ.

‘ಕೇರ್ ಬೈ ಬಿಎಲ್ಆರ್’ ಮೂಲಕ ಈ ಎಲ್ಲಾ ಹಂತಗಳಲ್ಲಿ ಅಗತ್ಯ ಸೇವೆಗಳನ್ನು ಒಂದೇ ವೇದಿಕೆಯಡಿ ತರಲಾಗಿದ್ದು, ಇವುಗಳನ್ನು ಸುಲಭವಾಗಿ ಮತ್ತು ಅತ್ಯಂತ ನಂಬಿಕೆಯಿಂದ ಬಳಸಿಕೊಳ್ಳಬಹುದಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಮೂಲಕ ಪ್ರಯಾಣಿಸುವಾಗ ಸತತವಾದ, ಉತ್ತಮ ಗುಣಮಟ್ಟದ ಅನುಭವವನ್ನು ನೀಡಲು ಮತ್ತು ಪ್ರಯಾಣದ ಶೈಲಿಯನ್ನು ಸ್ವತಃ ಪ್ರಯಾಣಿಕರೇ ಆರಿಸಿಕೊಳ್ಳುವ ಅವಕಾಶವನ್ನು ಒದಗಿಸಲು ಈ ಪ್ರಯತ್ನ ನಮಗೆ ನೆರವಾಗುತ್ತದೆ ಎಂದು ತಿಳಿಸಿದರು.


Share

You cannot copy content of this page