ಸಮಗ್ರ ಸುದ್ದಿ

ಮೈಸೂರು ಮೃಗಾಲಯದ ಗಂಡು ಜಿರಾಫೆ “ಯುವರಾಜ” ನಿಧನ

Share

ಮೈಸೂರು: ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ದೀರ್ಅಯುಷಿ ಗಂಡು ಜಿರಾಫೆ “ಯುವರಾಜ” ವೃದ್ದಾಪ್ಯದ ಕಾರಣ ಇಂದು ಬೆಳಿಗ್ಗೆ 10.30ರ ಸಮಯದಲ್ಲಿ ಮೃತಪಟ್ಟಿದೆ.

1987ರಲ್ಲಿ ಜರ್ಮನಿಮೃಗಾಲಯದಿಂದ ತರಲಾಗಿದ್ದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ 2001ರಲ್ಲಿ ಜನಿಸಿದ ಯುವರಾಜ ಜಿರಾಫೆಯು ಜನಿಸಿದ ನಂತರ ಪ್ರಾಣಿಪಾಲಕರ ಕೈ ಆರೈಕೆಯಲ್ಲಿ ಬೆಲೆದ ಹಾಗೂ ಮೃಗಾಲಯದಲ್ಲಿ 25 ವರ್ಷಗಳ ಕಾಲ ಬದುಕಿದ ಜಿರಾಫೆಯಾಗಿದೆ.

ಹನಿ ಮತ್ತು ಹೆನ್ರಿ ಜಿರಾಫೆಗಳಿಗೆ ಜನಿಸಿದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಮತ್ತು ಯುವರಾಜ ಜಿರಾಫೆಗಳಲ್ಲಿ ಈವರೆಗೆ ಬದುಕಿದ ಜಿರಾಫೆ ಯುವರಾಜ ಜಿರಾಫೆಯಾಗಿದ್ದು, ಜಿರಾಫೆಯ ಸಾವು ಮೃಗಾಲಯಕ್ಕೆ ತುಂಬಲಾರದ ನಷ್ಟವಾಗಿದ್ದು, ಮೈಸೂರು ಮೃಗಾಲಯವು ತೀವ್ರ ಸಂತಾಪವನ್ನು ಸೂಚಿಸಿದೆ.


Share

You cannot copy content of this page