ಸಮಗ್ರ ಸುದ್ದಿ

ಫೆಬ್ರವರಿ 4 ವರೆಗೆ ವಿಧಾನಸಭಾ ಕಲಾಪವನ್ನು ನಡೆಸಲು ತೀರ್ಮಾನ

Share

ಬೆಂಗಳೂರು: ಜನವರಿ 22 ರಿಂದ ಆರಂಭವಾದ 9ನೇ ಅಧಿವೇಶನವನ್ನು ಜನವರೊ 31ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಹಲವು ವಿಷಯಗಳನ್ನು ಸದನದಲ್ಲಿ ಚರ್ಚಿಸುವ ಸಲುವಾಗಿ ಕಲಾಪವನ್ನು ಫೆಬ್ರವರಿ 4 ವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ತಿಳಿಸಿದರು.

ಫೆಬ್ರವರಿ 4 ರಂದು ಸದನ ಕಲಾಪವನ್ನು ಮುಂದೂಡಿರುವುದರಿಂದಾಗಿ 31ರ ಶನಿವಾರ ಕಲಾಪವನ್ನು ನಡೆಸಲಾಗುವುದಿಲ್ಲ. ಫೆಬ್ರವರಿ 2 ರಂದು ಮುಖ್ಯಮಂತ್ರಿಗಳು ಸದನದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರವನ್ನು ನೀಡಲಿದ್ದಾರೆ ಎಂದು ಅವರು ಸದನಕ್ಕೆ ತಿಳಿಸಿದರು.


Share

You cannot copy content of this page