ಸಮಗ್ರ ಸುದ್ದಿ

ಮಹಾಕವಿ ಕುವೆಂಪು ರವರ ಮೈಸೂರಿನ ನಿವಾಸವನ್ನು ರಾಷ್ಟ್ರ ಕವಿ ಸ್ಮಾರಕ ವಾಗಿಸಲು ಕ್ರಮ:ಶಿವರಾಜ ಎಸ್.ತಂಗಡಗಿ

Share

ಬೆಂಗಳೂರು:ಮಹಾಕವಿ ಕುವೆಂಪುರವರ ಮೈಸೂರಿನ ನಿವಾಸ ಉದಯರವಿಯನ್ನು ರಾಷ್ಟ್ರ ಕವಿ ಸ್ಮಾರಕವಾಗಿ ಸಂರಕ್ಷಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ಎಸ್.ತಂಗಡಗಿ ತಿಳಿಸಿದರು.

ಅವರು ಇಂದು ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಕೆ.ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಮಹಾಕವಿಯ ದರ್ಶನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸ್ಮಾರಕದ ಉದ್ದೇಶವಾಗಿದೆ ಎಂದರು.

ರಾಷ್ಟ್ರಕವಿ ಕುವೆಂಪು ಅವರ ಮಗಳು ಮೈಸೂರು ನಿವಾಸ ಉದಯರವಿಯನ್ನು ಸ್ಮಾರಕವನ್ನಾಗಿ ಸಂರಕ್ಷಿಸಿ ಸರ್ಕಾರಕ್ಕೆ ಹಸ್ತಾಂತರಿಸಲು ಕೆಲವು ಬೇಡಿಕೆಗಳನ್ನು ಸಲ್ಲಿಸಿರುತ್ತಾರೆ.
ಈಗಾಗಲೇ ರಾಷ್ಟ್ರ ಕವಿ ಕುವೆಂಪು ಅವರ ಮಗಳು ಮತ್ತು ಅಳಿಯ ಅವರ ಜೊತೆ ಮಾತನಾಡಿದ್ದು, ಕುವೆಂಪು ರವರು ವಾಸವಿದ್ದ ಉದಯರವಿ ನಿವಾಸವನ್ನು ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಾಗಿ ತಿಳಿಸಿದರು.


Share

You cannot copy content of this page