ಸಮಗ್ರ ಸುದ್ದಿ

ರಾಜ್ಯದ ವಾಹನ ಸವಾರರಿಗೆ ಮತ್ತೊಮ್ಮೆ ಟ್ರಾಫಿಕ್ ಫೈನ್ ಶೇ 50% ರಿಯಾಯಿತಿ ಘೋಷಣೆ

Share

ಬೆಂಗಳೂರು, ನ.20: ರಾಜ್ಯದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿಯಿರುವ ದಂಡ ಮೊತ್ತದ ಮೇಲೆ ಶೇ.50% ರಿಯಾಯಿತಿ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ದಂಡದ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991-92 ರಿಂದ  2019-20 ರ ಅವಧಿಯಲ್ಲಿ ದಾಖಲಾಗಿ ಪಾವತಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡ 50 ರಷ್ಟು ಮಾತ್ರ ರಿಯಾಯಿತಿ ನೀಡಿ ಬಾಕಿ ಮೊತ್ತವನ್ನು ಪಾವತಿಸಲು ಸರ್ಕಾರವು ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ.

ಈ ತೀರ್ಮಾನದಿಂದ ಲಕ್ಷಾಂತರ ವಾಹನ ಚಾಲಕರಿಗೆ ಅನುಕೂಲವಾಗಲಿದೆ.

ಸಾರ್ವಜನಿಕರು ಈ ಸದಾವಕಾಶವನ್ನು ಬಳಸಿಕೊಂಡು ತಮ್ಮ ವಾಹನಗಳ ಇ-ಚಲನ್ ಮೂಲಕ ದಾಖಲಾಗಿರುವ ದಂಡವನ್ನು ಸಕಾಲದಲ್ಲಿ ಪಾವತಿಸಿ ಶೇಕಡ 50% ರ ರಿಯಾಯಿತಿಯನ್ನು ಪಡೆಯಬಹುದು ಎಂದು ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ(ಪ್ರ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ್ರಾಫಿಕ್ ಫೈನ್ ಅನ್ನು ಅಧಿಕೃತ ಜಾಲತಾಣ https://kspapp.ksp.gov.in/ksp/api/traffic-challan/home ನಲ್ಲಿ ವೀಕ್ಷಿಸಬಹುದು.


Share

You cannot copy content of this page