ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇಕಡ 5 ರಷ್ಟು ಹೆಚ್ಚಳ ಮಾಡಿದೆ.
ಈ ಕುರಿತು ಬಿ.ಎಂ.ಆರ್.ಸಿ.ಎಲ್ ದರ ಪರಿಷ್ಕರಣೆ ಮಾಡಿ ಪ್ರಕಟಣೆಯನ್ನು ಹೊರಡಿಸಿದ್ದು, ಇದೇ ಫೆಬ್ರವರಿ 9 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ದರ ಕನಿಷ್ಟ ರೂ. 1 ಹಾಗೂ ಗರಿಷ್ಟ ರೂ.5 ನಷ್ಟು ಹೆಚ್ಚಳವಾಗಿದೆ. ಕನಿಷ್ಟ ರೂ.10 ಇರುವ ದರ ರೂ.11 ಕ್ಕೆ ಗರಿಷ್ಟ ರೂ.90 ಇರುವ ದರ ರೂ.95 ಕ್ಕೆ ಏರಲಿದೆ ಎಂದು ಬಿ.ಎಂ.ಆರ್.ಸಿ.ಎಲ್ ಪ್ರಕಟಣೆ ತಿಳಿಸಿದೆ.
