ಬೆಂಗಳೂರು: ವಿದ್ಯಾರ್ಥಿಗಳು ಒತ್ತಡ ಮುಕ್ತವಾಗಿ ಪರೀಕ್ಷೆ ಎದುರಿಸುವುದು ಸೇರಿದಂತೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳೊಂದಿಗೆ ನಡೆಸುವ ಸಂವಾದ ಕಾರ್ಯಕ್ರಮ “ಪರೀಕ್ಷಾ ಪೆ ಚರ್ಚಾ” ನಾಳೆ ಪ್ರಸಾರವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ದೇಶದ ನಾಗರಿಕರು ಈ ಬಾರಿಯ ವಿಶೇಷ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಆಹ್ವಾನ ನೀಡಿದ್ದಾರೆ.
ಯುವಜನತೆಯೊಂದಿಗೆ ಸಂವಾದ ನಡೆಸುವುದು ಚೇತೋಹಾರಿ ಅನುಭವ ನೀಡುವಂಥದ್ದು. ವಿದ್ಯಾರ್ಥಿಗಳು, ಒತ್ತಡ ಮುಕ್ತರಾಗಿ ಪರೀಕ್ಷೆ ಎದುರಿಸುವುದು ಅಗತ್ಯ ಎಂದು ಹೇಳಿರುವ ಪ್ರಧಾನಿ ಅವರು, ಎದುರಾಗುವ ಸವಾಲುಗಳನ್ನು ನಿಭಾಯಿಸುವಲ್ಲಿ, ಸಮತೋಲನ ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವಲ್ಲಿ, ಪ್ರಾಯೋಗಿಕ ದೃಷ್ಟಿಕೋನಗಳನ್ನು ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ, ಈ ಬಾರಿ ದೇವ್ ಮೊಗ್ರಾ, ಕೊಯಮತ್ತೂರು, ರಾಯಪುರ, ಗುವಾಹಟಿ ಮತ್ತು ದೆಹಲಿಯ ವಿದ್ಯಾರ್ಥಿಗಳೊಂದಿಗೆ ,ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ನಡೆಯಲಿದೆ.
