ಮಂಡ್ಯ, ನ.22 : ನೈಋತ್ಯ ರೈಲ್ವೆ, ಮೈಸೂರು ವಿಭಾಗದ ರೈಲ್ವೇ ರಕ್ಷಣಾ ದಳ ವತಿಯಿಂದ ಎರಡನೇ ಹಂತದ ವಾರ್ಷಿಕ ಶೂಟಿಂಗ್ ವರ್ಗೀಕರಣ ಗುರಿ ಅಭ್ಯಾಸವನ್ನು ನವೆಂಬರ್ 25 ರಂದು ಬೆಳಿಗ್ಗೆ 06:00 ಗಂಟೆಯಿಂದ ಮಧ್ಯಾಹ್ನ 03:00 ಗಂಟೆಯವರೆಗೆ, ಮಂಡ್ಯ ಜಿಲ್ಲೆಯ ದೊಡ್ಡ ಬ್ಯಾಡರಹಳ್ಳಿ ಶೂಟಿಂಗ್ ಶ್ರೇಣಿಯಲ್ಲಿ ನಡೆಸಲಾಗುತ್ತದೆ.
ಈ ಅಭ್ಯಾಸದ ಹಿನ್ನೆಲೆಯಲ್ಲಿ, ಅಕ್ಕ – ಪಕ್ಕದ ಗ್ರಾಮಸ್ಥರು ಹಾಗೂ ತಮ್ಮ ದನಕರುಗಳನ್ನು ಶೂಟಿಂಗ್ ಶ್ರೇಣಿಯ ಒಳಗೂ ಹಾಗೂ ಸುತ್ತಮುತ್ತಲು ಚಲನ ವಲನ ಮಾಡದಂತೆ ವಿನಂತಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ನಿವಾಸಿಗಳು ಸಹಕರಿಸಬೇಕಾಗಿ ಕೋರಿದೆ ಎಂದು ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪೃಥ್ವಿ ಎಸ್ ಹುಲ್ಲಟ್ಟಿ ಅವರು ತಿಳಿಸಿದ್ದಾರೆ.
