ಸಮಗ್ರ ಸುದ್ದಿ

ಕಬ್ಬನ್ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ: ನವೆಂಬರ್ 27 ರಿಂದ‌ ಆರಂಭ

Share

ಬೆಂಗಳೂರು, ನ. 23: ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನದ ಆವರಣದಲ್ಲಿ ನವೆಂಬರ್ 2025ರ ಮಾಹೆಯಲ್ಲಿ “ಹೂಗಳ ಹಬ್ಬ -2025 ಕಲೆ, ಸಂಸ್ಕೃತಿ ಸಮಾಗಮ” ಶೀರ್ಷಿಕೆಯಡಿ ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ಒಟ್ಟು 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಈ ಫಲಪುಷ್ಪ ಪ್ರದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಕಲ್ಲಿನ ರಥದ ಹೂವಿನ ಕಲಾಕೃತಿ ಹಾಗೂ ಮಕ್ಕಳ ಜ್ಞಾನ ಹೆಚ್ಚಿಸುವಲ್ಲಿ ಸಹಕಾರಿಯಾಗುವ ವಿವಿಧ ಬಗೆಯ ಪುಷ್ಪಕಲಾಕೃತಿಗಳನ್ನು ಪ್ರಸ್ತುತಪಡಿಸುವುದರೊಂದಿಗೆ ಇಕೆಬಾನ ಜಾನೂರ್, ಥಾಯ್ ಆರ್ಟ್, ಬೋನ್ಸಾಯ್ ಪ್ರದರ್ಶನ ಹಾಗೂ ಸ್ಪರ್ಧೆಗಳನ್ನೂ ಸಹ ಆಯೋಜಿಸಲಾಗಿದೆ.

ಈ ಪ್ರದರ್ಶನದಲ್ಲಿ, ಮಕ್ಕಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ರಂಗೋಲಿ ಸ್ಪರ್ಧೆ, ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ, ನೃತ್ಯ ಸ್ಪರ್ಧೆ, ವೇಷಭೂಷಣ ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 7:00 ಗಂಟೆಯವರೆಗೆ ಪುಷ್ಪ ಪ್ರದರ್ಶನ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ  ಬೆಂಗಳೂರು ಶ್ರೀ ಚಾಮರಾಜೇಂದ್ರ ಕಬ್ಬನ್ ಉದ್ಯಾನವನದ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.


Share

You cannot copy content of this page