ಸಮಗ್ರ ಸುದ್ದಿ

ಇಂದು ಅಪರೂಪದ ಚಂದ್ರಗ್ರಹಣ| ಹಲವು ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶವಿಲ್ಲ

Share

ಅಪರೂಪದ ಚಂದ್ರಗ್ರಹಣ ಇಂದು ಘಟಿಸಲಿದೆ.
ಗ್ರಹಣ ಮಧ್ಯಾಹ್ನ 3.20ರಿಂದ ಆರಂಭವಾಗಿ ಸಂಜೆ 6.47ಕ್ಕೆ ಮುಕ್ತಾಯವಾಗಲಿದೆ.

ಭಾರತದಲ್ಲಿ ಮೋಡದ ವಾತಾವರಣ ಆಧರಿಸಿ, ಗ್ರಹಣ ಗೋಚರಿಸಲಿದೆ.

ಸಾಮಾನ್ಯವಾಗಿ 6.26ರಿಂದ 6.40ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಗ್ರಹಣ ಗೋಚರವಾಗಲಿದೆ ಎಂದು ಹೇಳಲಾಗಿದೆ.
ಗ್ರಹಣದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಹಲವು ದೇವಾಲಯಗಳಲ್ಲಿ ಮಧ್ಯಾಹ್ನದಿಂದ ಸಂಜೆ 7 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ.

ಈ ಚಂದ್ರಗ್ರಹಣವನ್ನು ಖಗ್ರಾಸ ಚಂದ್ರಗ್ರಹಣ, ಕೇತುಗ್ರಸ್ಥ ಚಂದ್ರಗ್ರಹಣ ಎಂದೂ ಸಹ ಕರೆಯಲಾಗುವುದು.


Share

You cannot copy content of this page