ಬೆಂಗಳೂರು: ರೋಗ ತಡೆಗಟ್ಟುವ ಮತ್ತು ಸಮಗ್ರ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ, ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಸಮಗ್ರ ಜೀವನ-ಕ್ರಮ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ ಇದನ್ನು ಪ್ರಪ್ರಥಮವಾಗಿ ಪರಿಚಯಿಸಲಾಗುತ್ತಿದ್ದು ಬಾಲ್ಯದಿಂದ ವಯಸ್ಕರವರೆಗಿನ ಜನರಿಗೆ ರೋಗ ನಿರೋಧಕ ಲಸಿಕೆ ನೀಡುವಂತಹ ರಚನಾತ್ಮಕ ಅಭಿಯಾನ ಇದಾಗಿದೆ.
ಸ್ಪರ್ಶ್ ಸಮೂಹ ಆಸ್ಪತ್ರೆಗಳ ಅಧ್ಯಕ್ಷ ಡಾ. ಶರಣ್ ಶಿವರಾಜ್ ಪಾಟೀಲ್ ಅವರು ಲಸಿಕಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸ್ಪರ್ಶ್ ಆಸ್ಪತ್ರೆಯಲ್ಲಿ ಮೊದಲಿಗೆ ಈ ಲಸಿಕೆ ನೀಡುವುದನ್ನು ಪ್ರಾರಂಭಿಸಲಾಗುತ್ತಿದ್ದು ಬಳಿಕ ಸ್ಪರ್ಶ್ ಸಮೂಹದ ಇತರೇ ಅಸ್ಪತ್ರೆಗಳಲ್ಲಿ (ಯಲಹಂಕ, ಬಾಣಸವಾಡಿ, ಸರ್ಜಾಪುರ, ಯಶವಂತಪುರ, ಆರ್.ಆರ್,ನಗರ) ಹಂತ ಹಂತವಾಗಿ ಈ ಸೌಲಭ್ಯ ಲಭ್ಯವಾಗಲಿದೆ. ಲಸಿಕೆ ತಯಾರಿಕಾ ಸಂಸ್ಥೆ ಝೈಡಸ್ ಲೈಫ್‌ಸಯನ್ಸ್‌ನೊಂದಿಗೆ ಈ ಅಭಿಯಾನವನ್ನು ಆರಂಭಿಸಲಾಗುತ್ತಿದ್ದು ಝೈಡಸ್ ಸಂಸ್ಥೆಯು ಈ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ಮತ್ತು ಸಂಪನ್ಮೂಲಗಳೊಂದಿಗೆ ಸಾಮರ್ಥ್ಯ ನಿರ್ಮಾಣದಲ್ಲಿ ಸ್ಪರ್ಶ್‌ಗೆ ಸಹಯೋಗ ಒದಗಿಸಲಿದೆ. ಸ್ಪರ್ಶ್ ಆಸ್ಪತ್ರೆ ಸಮೂಹದ ಸಾಂಕ್ರಾಮಿಕ ರೋಗಗಳ ಹಿರಿಯ ಸಮಾಲೋಚಕ ಡಾ. ಜಾನ್ ಪಾಲ್ ಅವರ ನೇತೃತ್ವದಲ್ಲಿ – ಸಮಗ್ರ ಜೀವನ ಕ್ರಮ ಲಸಿಕಾ ಅಭಿಯಾನದ ಜಾಗೃತಿ ಮತ್ತು ಸಂಶೋಧನೆಗಳು ನಡೆಯಲಿವೆ.
ಭಾರತ ಇಂದು ರೋಗಗಳ ಬೆಳವಣಿಗೆಯ ಎರಡು ಹೊರೆಗಳನ್ನೆದುರಿಸುತ್ತಿದೆ. ಮೊದಲನೆಯದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಹೃದಯರಕ್ತನಾಳದ ಕಾಯಿಲೆಗಳು, ಮಧುಮೇಹ ಮತ್ತು ಕ್ಯಾನ್ಸರ್‌ಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಈಗ ಸುಮಾರು 63-65 ಪ್ರತಿಶತದಷ್ಟು ಸಾವುಗಳಿಗೆ ಕಾರಣವಾಗಿದ್ದರೆ ತೀವ್ರವಾಗಿ ಹರಡುವ ವಿಷಮ ಶೀತ ಜ್ವರ ಮತ್ತು ನ್ಯುಮೋನಿಯಾದಂತಹ ಸಾಂಕ್ರಾಮಿಕ ರೋಗಗಳು ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿದ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆ. ತೀಕ್ಷ್ಣವಾಗುತ್ತಿರುವ ನಗರೀಕರಣ, ಜಡತ್ವದ ಜೀವನಶೈಲಿ ಮತ್ತು ಪರಿಸರದ ಅಂಶಗಳು ಬೆಂಗಳೂರಿನಂತಹ ದೊಡ್ಡ ನಗರ ಕೇಂದ್ರಗಳಲ್ಲಿ ಆರೋಗ್ಯದ ಅಪಾಯಗಳನ್ನು ಹೆಚ್ಚಿಸುತ್ತಿವೆ.
ಈ ಲಸಿಕಾ ಅಭಿಯಾನವು ಜೀವನಪರ್ಯಂತ ರೋಗಗಳನ್ನು ತಡೆಗಟ್ಟುವ ಆರೋಗ್ಯ ಉಪಕ್ರಮವಾಗಿ ಉತ್ತೇಜಿಸುವ ಗುರಿ ಹೊಂದಿದ್ದು ಹದಿಹರೆಯದವರು, ವಯಸ್ಕರು, ವಯಸ್ಸಾದ ಜನಸಂಖ್ಯೆ ಮತ್ತು ಹೆಚ್ಚಿನ ಅಪಾಯದ ಗುಂಪುಗಳನ್ನು ಒಳಗೊಂಡಂತೆ ಬಾಲ್ಯದ ರೋಗ ನಿರೋಧಕ ಪ್ರತಿರಕ್ಷಣೆಯನ್ನು ಮೀರಿ ವಿವಿಧ ವಯೋಮಾನಗಳಿಗೆ ವಿಸ್ತರಿಸಲಿದೆ.
ಭಾರತದ ಆರೋಗ್ಯ ವ್ಯವಸ್ಥೆಯಲ್ಲಿನ ನಿರ್ಣಾಯಕ ಅಂತರವನ್ನು ಪರಿಹರಿಸಲು ಈ ಅಭಿಯಾನವನ್ನು ವಿನ್ಯಾಸಗೊಳಿಸಲಾಗಿದ್ದು ಇಲ್ಲಿ ಹೆಚ್ಚುತ್ತಿರುವ ರೋಗದ ಅಪಾಯಗಳು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಮಾದರಿಗಳನ್ನು ಬದಲಾಯಿಸುವ ಹೊರತಾಗಿಯೂ ವಯಸ್ಕರ ಲಸಿಕಾ ಕಾರ್ಯಕ್ರಮವು ಗಮನಾರ್ಹವಾಗಿ ಕಡಿಮೆ ಬಳಕೆಯಾಗುತ್ತಿದೆ.
ಹೆಚ್‌ಪಿವಿ (ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ), ಶಿಂಗಲ್ಸ್ (ಹರ್ಪಿಸ್ ಜೋಸ್ಟರ್), ನ್ಯುಮೋಕೊಕಲ್ ಲಸಿಕೆಗಳು (ನ್ಯುಮೋನಿಯಾ ಮತ್ತು ಆಕ್ರಮಣಕಾರಿ ಸೋಂಕುಗಳಿಗೆ), ಮತ್ತು Tdap/Td ಬೂಸ್ಟರ್‌ಗಳ ವಿರುದ್ಧ ಶಿಫಾರಸು ಮಾಡಲಾದ ಲಸಿಕೆಗಳ ಮೂಲಕ ವಯಸ್ಕರನ್ನು ರಕ್ಷಿಸಲು ಪ್ರೋತ್ಸಾಹಿಸುವ ಜೀವನ ಕ್ರಮದ ಪ್ರತಿರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೀವನದ ವಿವಿಧ ಹಂತಗಳಲ್ಲಿನ ಲಸಿಕೆಯು ದೀರ್ಘಾವಧಿವರೆಗೆ ಆರೋಗ್ಯವನ್ನು ಕಾಪಾಡುವ ಕೊಡುಗೆ ನೀಡುತ್ತವೆ.
ಸ್ಪರ್ಶ್ ಆಸ್ಪತ್ರೆಯ ಈ ವಿಶಿಷ್ಟ ಉಪಕ್ರಮಕ್ಕೆ ಚಾಲನೆ ನೀಡಿದ ಸ್ಪರ್ಶ್ ಸಮೂಹ ಆಸ್ಪತ್ರೆಗಳ ಅಧ್ಯಕ್ಷ ಮುಖ್ಯ ಮೂಳೆ ಶಸ್ತ್ರಚಿಕಿತ್ಸಕ ಡಾ.ಶರಣ ಶಿವರಾಜ್ ಪಾಟೀಲ್ ಮಾತನಾಡಿ, “ಭಾರತದ ಆರೋಗ್ಯ ವ್ಯವಸ್ಥೆಯು ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಹೆಚ್ಚು ಗಮನಹರಿಸುವ ಮಾದರಿಯಿಂದ ಆರೋಗ್ಯವನ್ನು ಸಕ್ರಿಯವಾಗಿ ರಕ್ಷಿಸುವ ಮಾದರಿಗೆ ಕ್ರಮೇಣ ಬದಲಾಗಬೇಕು. ತಡೆಗಟ್ಟುವಿಕೆ ಬಲವಾದ ಮತ್ತು ಹೆಚ್ಚು ಸ್ಥಿತಿಸ್ಥಾಪಕ ಸಮಾಜದ ಅಡಿಪಾಯವಾಗಿದ್ದು ಭಾರತದಲ್ಲಿ ಕಡಿಮೆ ಬಳಕೆಯಾಗುತ್ತಿದೆ” ಎಂದರು.
“ಜೀವನ ಕ್ರಮ ಲಸಿಕೆಯ ಈ ಅಭಿಯಾನವು ಜೀವನದ ಪ್ರತಿಯೊಂದು ಹಂತದಲ್ಲೂ ರಕ್ಷಣೆಯ ಅಗತ್ಯವಿರುವುದನ್ನು ಗುರುತಿಸುತ್ತದೆ-ಬಾಲ್ಯದಿಂದ ಹಿರಿಯ ಜೀವಿಗಳವರೆಗೆ. ಈ ಉಪಕ್ರಮವು, ತಡೆಗಟ್ಟುವಿಕೆ, ಅರಿವು ಮತ್ತು ಸಕಾಲಿಕ ಲಸಿಕೆ ನೀಡುವುದರಿಂದ ಜೀವಿತಾವಧಿಯ ವಿವಿಧ ಹಂತಗಳಲ್ಲಿ ಸುರಕ್ಷಿತವಾಗಿರುವಲ್ಲಿ ನೆರವಾಗುವುದು.ಆರೋಗ್ಯ ರಕ್ಷಣೆಯ ಅವಿಭಾಜ್ಯ ಅಂಗವಾಗಿರುವ ಲಸಿಕಾ ಅಭಿಯಾನದ ವಿಶಾಲವಾದ ಸಾರ್ವಜನಿಕ-ಆರೋಗ್ಯ ಮನೋಭಾವವನ್ನು ನಾವು ಪ್ರೋತ್ಸಾಹಿಸುತ್ತೇವೆ” ಎಂದು ಡಾ. ಪಾಟೀಲ್ ಹೇಳಿದರು.
ಜೊತೆಗೆ ಈ ಲಸಿಕೆಯ ಮೌಲ್ಯಮಾಪನವನ್ನು ಎಲ್ಲಾ ವಿಭಾಗಗಳಲ್ಲಿಯೂ ನಡೆಸಲಿದ್ದು ನಿರ್ಣಾಯಕ ಹಂತಗಳಲ್ಲಿ ಲಸಿಕೆಯ ಪರಿಣಾಮ, ಸ್ಥಿತಿಗತಿಗಳನ್ನು ಪರಿಶೀಲಿಸಲಿದ್ದಾರೆ. ಹೊರರೋಗಿ ಸಮಾಲೋಚನೆಗಳು, ಆಸ್ಪತ್ರೆಯ ದಾಖಲಾತಿಗಳು, ತುರ್ತು ಆರೈಕೆ ಮತ್ತು ಅನುಸರಣಾ ಭೇಟಿಗಳು ಸೇರಿದಂತೆ – ರೋಗ ತಡೆಗಟ್ಟುವ ರಕ್ಷಣೆಯು ದೈನಂದಿನ ಆರೋಗ್ಯ ವಿತರಣೆಯ ಅವಿಭಾಜ್ಯ ಅಂಗವಾಗಿದೆ ಎಂದು ಖಚಿತಪಡಿಸುತ್ತಿದ್ದು ಸ್ಪರ್ಶ್ ಆಸ್ಪತ್ರೆಯ ನುರಿತ ವೈದ್ಯರ ತಂಡ ಬೆಂಬಲಕ್ಕಿರಲಿದೆ ಎಂದರು.
ಪ್ರತಿರಕ್ಷಣಾ ಆರೈಕೆಯನ್ನು ಪ್ರತಿದಿನದ ವೈದ್ಯಕೀಯ ಅಭ್ಯಾಸವಾಗಿ ರೂಪಾಂತರಿಸುವ ಮಹತ್ದ ಕುರಿತು ಮಾತನಾಡಿದ ಸಮೂಹ ಸಿಇಒ ಜಸ್‌ದೀಪ್ ಸಿಂಗ್ ಅವರು ರೋಗ ತಡೆಗಟ್ಟುವ ಆರೋಗ್ಯ ಸೇವೆಯನ್ನು ಆಸ್ಪತ್ರೆಯ ಪರಿಸರ ವ್ಯವಸ್ಥೆಯಲ್ಲೇ ನೀಡುವ ಅಗತ್ಯತೆ ಮತ್ತು ಮಹತ್ವವನ್ನು ವಿವರಿಸಿದರು. ವಿವಿಧ ವಿಭಾಗಗಳೊಂದಿಗೆ ಲಸಿಕಾ ಮೌಲ್ಯಮಾಪನವನ್ನು ಮತ್ತು ರೋಗಿಗಳ ಸಮಾಲೋಚನೆಯನ್ನು ನಡೆಸುವುದರೊಂದಿಗೆ ರೋಗ ತಡೆಗಟ್ಟುವಿಕೆಯನ್ನು ಸರಳ, ಎಲ್ಲರಿಗೂ ಲಭ್ಯವಾಗುವಂತಹ ಮತ್ತು ರೋಗಿಗಳಿಗೆ ಮತ್ತವರ ಕುಟುಂಬಕ್ಕೆ ನಿತ್ಯಕ್ರಮವಾಗಿಸುವ ಗುರಿ ಹೊಂದಲಾಗಿದೆ.
ನಮ್ಮ ಆಸ್ಪತ್ರೆಗಳಿಗೆ ಭೇಟಿ ನೀಡುವ ಪ್ರತಿಯೊಬ್ಬ ವ್ಯಕ್ತಿಯೂ ನಿಖರವಾದ ಮಾರ್ಗದರ್ಶನ, ಲಭ್ಯತೆ ಮತ್ತು ಜೀವನದ ವಿವಿಧ ಹಂತಗಳಲ್ಲಿ ಸುರಕ್ಷಿತವಾಗಿರುವಂತೆ ಅಗತ್ಯವಿರುವ ಬೆಂಬಲ ಪಡೆಯುವುದನ್ನು ಖಾತರಿಪಡಿಸುವುದರತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ ಎಂದರು.
ಹಿರಿಯ ಸಮಾಲೋಚಕ ಮತ್ತು ಸಮೂಹ ವೈದ್ಯಕೀಯ ನಿರ್ದೇಶಕ ಹೃದ್ರೋಗಗಳ ತಜ್ಞ ಡಾ.(ಪ್ರೊ) ರಂಜನ್ ಶೆಟ್ಟಿ, ಸ್ಪರ್ಶ್ ಆಸ್ಪತ್ರೆ ಸಮೂಹದ ಹಿರಿಯ ವೈದ್ಯರು ಮತ್ತಿತರರು ಭಾಗವಹಿಸಿದ್ದರು.
