ಸಮಗ್ರ ಸುದ್ದಿ

ನವೀಕರಿಸಬಹುದಾದ ವಿದ್ಯುತ್‌ ಬಳಕೆಯಲ್ಲಿ ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿ: ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ | ಉತ್ತರದಿಂದ ದಕ್ಷಿಣ ಕರ್ನಾಟಕಕ್ಕೆ ವಿದ್ಯುತ್ ರವಾನಿಸಲು 𝟵 ಗಿಗಾವ್ಯಾಟ್‌ ಗ್ರೀನ್‌ ಎನರ್ಜಿ ಕಾರಿಡಾರ್‌ ಗೆ ಕೇಂದ್ರಕ್ಕೆ ಪ್ರಸ್ತಾವನೆ

Share

ನವದೆಹಲಿ:ಭವಿಷ್ಯದ ವಿದ್ಯುತ್ ಅಗತ್ಯತೆಗಳಿಗೆ ಸಜ್ಜಾಗಿರುವ ಗ್ರಿಡ್ ನಿರ್ಮಾಣ, ಭೌಗೋಳಿಕ ಸವಾಲುಗಳು ಹಾಗೂ ಸಪ್ಲೇ ಚೈನ್‌ ನಿರ್ವಹಣೆಯನ್ನು ಕರ್ನಾಟಕ ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದೆ. ಸಚಿವರಾದ ಕೆ.ಜೆ. ಜಾರ್ಜ್‌ ಹಾಗೂ ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳಾದ ಗೌರವ್‌ ಗುಪ್ತಾ ಅವರ ದೂರದೃಷ್ಟಿಯಿಂದ ಕರ್ನಾಟಕ ರಾಜ್ಯ ನವೀಕರಿಸಬಹುದಾದ ವಿದ್ಯುತ್‌ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಹಲವಾರು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.

ಇಂದು ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಭಾರತ್ ಎಲೆಕ್ಟ್ರಿಸಿಟಿ ಸಮ್ಮಿಟ್ 𝟮𝟬𝟮𝟲 ರ ನೆಕ್ಸ್ಟ್ ಜನರೇಶನ್ ಟ್ರಾನ್ಸ್ ಮಿಷನ್ ಇನ್ಫ್ರಾ ಸ್ಟಕ್ಚರ್ ಅಂಡ್ ಆಪರೇಶನ್ಸ್ ಪ್ಯಾನೆಲ್ ಚರ್ಚೆಯಲ್ಲಿ ಬಾಗವಹಿಸಿ ಮಾತನಾಡಿದರು.

ಉತ್ತರ-ದಕ್ಷಿಣ ವಿದ್ಯುತ್ ಅಸಮತೋಲನ ನಿವಾರಣೆ
ಕರ್ನಾಟಕ ರಾಜ್ಯದ ಒಟ್ಟು 𝟯𝟭,𝟬𝟬𝟬 𝗠𝗪 ವಿದ್ಯುತ್ ಸಾಮರ್ಥ್ಯದಲ್ಲಿ ಸರಿಸುಮಾರು 𝟮𝟭,𝟬𝟬𝟬 𝗠𝗪 (ಶೇ. 𝟱𝟳 ರಷ್ಟು) ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನ (𝗥𝗲𝗻𝗲𝘄𝗮𝗯𝗹𝗲 𝗘𝗻𝗲𝗿𝗴𝘆 – 𝗥𝗘) ಮೂಲಗಳಿಂದ ಪಡೆಯಲಾಗುತ್ತಿದೆ. ಹೆಚ್ಚಿನ ಬಿಸಿಲಿನಿಂದಾಗಿ ಉತ್ತರ ಕರ್ನಾಟಕವು ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನೆಯ ಕೇಂದ್ರವಾಗಿದ್ದರೆ, ವಿದ್ಯುತ್ ಬೇಡಿಕೆಯ ಬಹುಪಾಲು ದಕ್ಷಿಣ ಭಾಗಗಳಲ್ಲಿ (ಬೆಂಗಳೂರು) ಕೇಂದ್ರೀಕೃತವಾಗಿದೆ. ಈ ಭೌಗೋಳಿಕ ಸವಾಲನ್ನು ನಿಭಾಯಿಸಲು 𝗞𝗣𝗧𝗖𝗟 ಈಗಾಗಲೇ 𝟳,𝟬𝟬𝟬 𝗠𝗪 ಸಾಮರ್ಥ್ಯವನ್ನು ನಿರ್ವಹಿಸುವ ಗ್ರೀನ್ ಎನರ್ಜಿ ಕಾರಿಡಾರ್ ನ 𝟭 ಮತ್ತು 𝟮 ನೇ ಹಂತಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.

𝟭𝟵 𝗚𝗪 ಬೃಹತ್ ಕಾರಿಡಾರ್ ಯೋಜನೆ
ಈ ಎರಡೂ ಹಂತಗಳ ಯಶಸ್ಸಿನ ಹಿನ್ನಲೆಯಲ್ಲಿ, ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನ ಹಾಗೂ ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳಾದ ಗೌರವ್‌ ಗುಪ್ತಾ ಅವರ ಮುಂದಾಳತ್ವದಲ್ಲಿ ರಾಜ್ಯದ ವಿದ್ಯುತ್‌ ಪ್ರಸರಣ ಜಾಲವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.

ಮುಂಬರುವ ವರ್ಷಗಳಲ್ಲಿ, ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ವಿದ್ಯುತ್ ಒದಗಿಸಲು ನಾವು 𝟭𝟵 ಗಿಗಾವ್ಯಾಟ್‌ ಗ್ರೀನ್‌ ಎನರ್ಜಿ ಕಾರಿಡಾರ್‌ (𝗚𝗶𝗴𝗮𝘄𝗮𝘁𝘁 𝗚𝗿𝗲𝗲𝗻 𝗘𝗻𝗲𝗿𝗴𝘆 𝗖𝗼𝗿𝗿𝗶𝗱𝗼𝗿) ಯೋಜನೆಯನ್ನು ರೂಪಿಸುತ್ತಿದ್ದೇವೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಮೂರು 𝟳𝟲𝟱 𝗸𝗩 ಸ್ಟೇಷನ್‌ಗಳು, 𝟮𝟰 (ಇಪ್ಪತ್ತನಾಲ್ಕು) 𝟰𝟬𝟬 𝗸𝗩 ಸಬ್‌ಸ್ಟೇಷನ್‌ಗಳು ಮತ್ತು ಸುಮಾರು 𝟱𝟬𝟬 ಸರ್ಕ್ಯೂಟ್ ಕಿಲೋಮೀಟರ್ ಪ್ರಸರಣ ಮಾರ್ಗಗಳ ಸ್ಥಾಪನೆಯನ್ನು ಒಳಗೊಂಡಿರಲಿದೆ ಎಂದು ಅವರು ವಿವರಿಸಿದರು.

ಕೆಪಿಟಿಸಿಎಲ್‌ ಪ್ರಸ್ತುತ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ (𝗕𝗘𝗦𝗦) ಮತ್ತು ಪಂಪ್ಡ್ ಸ್ಟೋರೇಜ್ ಹೈಡ್ರೋ (𝗣𝗦𝗛) ಗಳತ್ತ ಹೆಚ್ಚಿನ ಗಮನ ಹರಿಸುತ್ತಿದೆ. “ಇದು ಪೀಕ್ ಲೋಡ್ ನಿರ್ವಹಣೆಯ (𝗣𝗲𝗮𝗸 𝗟𝗼𝗮𝗱 𝗠𝗮𝗻𝗮𝗴𝗲𝗺𝗲𝗻𝘁) ವೆಚ್ಚವನ್ನು ಗಣನೀಯವಾಗಿ ಇಳಿಸುತ್ತದೆ. ಗರಿಷ್ಠ ಬೇಡಿಕೆಯ ಸಮಯದಲ್ಲಿ ನವೀಕರಿಸಬಹುದಾದ ಇಂಧನದ ವಿದ್ಯುತ್‌ನ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುವುದರ ಜೊತೆಗೆ, ಶಕ್ತಿಯು ವ್ಯರ್ಥವಾಗದಂತೆ ತಡೆಯುತ್ತದೆ ಎಂದು ಅವರು ತಿಳಿಸಿದರು.

ಸ್ಥಳೀಯ ಉತ್ಪಾದಕರಿಗೆ ಪ್ರೋತ್ಸಾಹ
ವಿದ್ಯುತ್ ಉಪಕರಣಗಳ ರಾಷ್ಟ್ರವ್ಯಾಪಿ ಕೊರತೆಯನ್ನು ಪ್ರಸ್ತಾಪಿಸಿದ ಅವರು, “ಭಾರತದಾದ್ಯಂತ ಉತ್ತಮ ಉಪಕರಣಗಳ ಬೇಡಿಕೆ ಹೆಚ್ಚಾಗಿದೆ, ಆದರೆ ಪೂರೈಕೆಯ ಕೊರತೆಯಿದೆ. ಇದನ್ನು ಪರಿಹರಿಸಲು, ವಿದ್ಯುತ್ ಉಪಕರಣಗಳನ್ನು ಉತ್ಪಾದಿಸುವ ಸ್ಥಳೀಯ ತಯಾರಕರಿಗೆ ನಾವು ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಅಗತ್ಯ ನೀತಿ ರೂಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ರಾಜ್ಯದ ಕೈಗಾರಿಕಾ ನೀತಿಯಲ್ಲಿ ಇಂಧನ ಕ್ಷೇತ್ರದ ಅಗತ್ಯತೆಗಳೊಂದಿಗೆ ಹೊಂದಿಸುವ ಮೂಲಕ, ಸ್ಥಳೀಯ ಉತ್ಪಾದನೆ ಮತ್ತು ಜೋಡಣೆಯನ್ನು ಉತ್ತೇಜಿಸುವ ಗುರಿಯನ್ನು ಕರ್ನಾಟಕ ಹೊಂದಿದೆ,” ಎಂದರು.

ನವೀಕರಿಸಬಹುದಾದ ಇಂಧನ ಯುಗದಲ್ಲಿ ಉತ್ಪಾದನೆ ಮತ್ತು ವಿತರಣೆ ಎರಡನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಲು ಕರ್ನಾಟಕ ರಾಜ್ಯವು ಅಳವಡಿಸಿಕೊಂಡಿರುವ ಈ ಮಾದರಿಯು ದೇಶದ ಇತರ ರಾಜ್ಯಗಳಿಗೂ ಅತ್ಯುತ್ತಮ ಉದಾಹರಣೆಯಾಗಿದೆ (𝗖𝗮𝘀𝗲 𝗦𝘁𝘂𝗱𝘆) ಎಂದರು.


Share

You cannot copy content of this page