ಬೆಂಗಳೂರು: ವಿಧಾನಸಭೆಯಲ್ಲಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್ ಅವರು ಮಂಡಿಸಿದ 2026 ನೇ ಸಾಲಿನ ಕರ್ನಾಟಕ ಜ್ಞಾನಭಂಡಾರ ಹಸ್ತಪ್ರತಿಗಳು ಮತ್ತು ಡಿಜಿಟಲೀಕರಣ ವಿಧೇಯಕವು ಸರ್ವಾನುಮತದಿಂದ ಅನುಮೋದನೆಗೊಂಡಿತು.
ರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳಲ್ಲಿ, ಸಂಸ್ಥೆ, ಮಠಗಳಲ್ಲಿ ವಿಜ್ಞಾನ, ಇತಿಹಾಸ, ವೖದ್ಯಕೀಯ,ಯುನಾನಿ, ಆರ್ಯುವೇಧ, ಭೌಗೋಳಿಕ, ಇವೇ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಇರುವ ಎಲ್ಲಾ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಯವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂರಕ್ಷಿಸಿ ಇಡುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಆದ್ದರಿಂದ ಕರ್ನಾಟಕದ ಜ್ಞಾನಭಂಡಾರವನ್ನು ಒಂದು ಕಡೆ ಸಂರಕ್ಷಣೆ ಮಾಡುವ ಸಲುವಾಗಿ ಪ್ರಾಧಿಕಾರವನ್ನು ಮಾಡಲಾಗುವುದಲ್ಲದೆ, ಪ್ರಾಧಿಕಾರಕ್ಕೆ ಒಂದು ವರ್ಷದಲ್ಲಿ ಕನಿಷ್ಠ 5 ಲಕ್ಷ ಪುಟಗಳಷ್ಟು ಡಿಜಿಟಲೀಕರಣ ಮಾಡಬೇಕೆಂಬ ಗುರಿಯನ್ನು ನೀಡಲಾಗುವುದೆಂದು ತಿಳಿಸಿದರು.
“ಹಸ್ತಪತಿ” ಎಂದರೆ ವಿಶದಪಡಿಸಿದ ಹಸ್ತಪ್ರತಿಗಳು (illustrated manuscripts), ತಾಳೆಗರಿಯ ಮೇಲಿನ ಕಿರುರೂಪದ ವರ್ಣಚಿತ್ರಗಳು ಮತ್ತು ವುರಾತನ ಜ್ಞಾನವನ್ನು ಸಂರಕ್ಷಿಸುವ ಮೌಖಿಕ ಸಂಪ್ರದಾಯಗಳ ದೃಶ್ಯ-ಶ್ರವಣ ದಾಖಲೆಗಳನ್ನು ಒಳಗೊಂಡ ಹಾಗೂ ಮುದ್ರಣ ಅಥವಾ ಶಿಲಾಮುದ್ರಣ ಮಾಡದಿರುವ, ಸಂಸ್ಕೃತ, ಕನ್ನಡ, ಪ್ರಾಕೃತ, ಪಾಲಿ, ತಮಿಳು, ತೆಲುಗು, ಅರಬ್ಬಿ, ಪಾರ್ಸಿ, ಮೋಡಿ, ಶಾರದ ಅಥವಾ ಯಾವುದೇ ಇತರ ಭಾರತೀಯ ಅಥವಾ ವಿದೇಶಿ ಲಿಪಿಯುಳ್ಳ ಯಾವುದೇ ಕೈಬರಹ ಅಥವಾ ತಾಳೆಗರಿ ದಾಖಲೆ, ಭೋಜ-ತೊಗಟೆ (Birch-bark), ಹಾಳೆ, ಬಟ್ಟೆ, ತಾಮ್ರ ಪತ್ರ, ಶಿಲಾ ಶಾಸನ ಅಥವಾ ಯಾವುದೇ ಇತರ ಪದಾರ್ಥದಿಂದ ಮಾಡಿರುವ ಲಿಪಿಪತ್ರಗಳನ್ನು ಈ ಪ್ರಾಧಿಕಾರದಲ್ಲಿ ಸಂರಕ್ಷಿಸಲಾಗುವುದು ಎಂದು ಸಚಿವರು ತಿಳಿಸಿದರು.
ವಿರೋಧ ಪಕ್ಷದ ಶಾಸಕರಾದ ಎಸ್. ಸುರೇಶ್ ಕುಮಾರ್ ಇದರಡಿಯಲ್ಲೇ ಸೋಲಿಗರ ಆರೋಗ್ಯ ಪದ್ಧತಿಗಳನ್ನು ಸಂರಕ್ಷಣೆ ಮಾಡುವಂತೆ ಸಲಹೆ ನೀಡಿದರು.
