ಸಮಗ್ರ ಸುದ್ದಿ

ರೇಷನ್ ಕಾರ್ಡ್‍ದಾರರಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ

Share

ಬೆಂಗಳೂರು:ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಆಗಸ್ಟ್-2026 ಹಾಗೂ ಸೆಪ್ಟೆಂಬರ್-2026 ಈ ಎರಡೂ ತಿಂಗಳ ಆಹಾರ ಧಾನ್ಯಗಳ ವಿತರಣೆಯನ್ನು ಆಗಸ್ಟ್ ಮಾಹೆಯಲ್ಲೇ ಒಟ್ಟಿಗೆ ನೀಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ಅಂತ್ಯೋದಯ ಅನ್ನ ಯೋಜನೆ (AAY) ಕಾರ್ಡ್‍ಗೆ ಪ್ರತಿ ಕುಟುಂಬಕ್ಕೆ 28 ಕೆ.ಜಿ ಅಕ್ಕಿ ಮತ್ತು 42 ಕೆ.ಜಿ ರಾಗಿ ಒಟ್ಟು 70 ಕೆ.ಜಿ ಆಹಾರ ಧಾನ್ಯ ವಿತರಣೆಯಾಗಲಿದೆ.

ಕೇಂದ್ರ ಆದ್ಯತಾ ಕುಟುಂಬ ಪಡಿತರ ಚೀಟಿಗೆ (Central PHH Cards) ಪ್ರತಿ ಸದಸ್ಯರಿಗೆ 4 ಕೆ.ಜಿ ಅಕ್ಕಿ ಮತ್ತು 6 ಕೆ.ಜಿ ರಾಗಿ ಒಟ್ಟು 10 ಕೆ.ಜಿ ಆಹಾರ ಧಾನ್ಯ ನೀಡಲಾಗುವುದು.

ರಾಜ್ಯ ಆದ್ಯತಾ ಕುಟುಂಬ ಪಡಿತರ ಚೀಟಿಗೆ (State PHH Cards) ಪ್ರತಿ ಸದಸ್ಯರಿಗೆ ಒಟ್ಟು 10 ಕೆ.ಜಿ ಅಕ್ಕಿ ನೀಡಲಾಗುವುದು.

ಬಯೋಮೆಟ್ರಿಕ್ ಕಡ್ಡಾಯ:

ಎರಡು ತಿಂಗಳ ಆಹಾರ ಧಾನ್ಯವನ್ನು ಒಂದೇ ಮಾಹೆಯಲ್ಲಿ ಪಡೆಯುವುದರಿಂದ, ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಎರಡು ಬಾರಿ ಪ್ರತ್ಯೇಕವಾಗಿ ತಮ್ಮ ಆಧಾರ್ ಆಧಾರಿತ ಬೆರಳಚ್ಚು ಅಥವಾ ಬಯೋಮೆಟ್ರಿಕ್ ನೀಡುವುದು ಕಡ್ಡಾಯವಾಗಿರುತ್ತದೆ.

ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶದ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ತೊಂದರೆ ಅಥವಾ ಸಮಸ್ಯೆಗಳು ಎದುರಾದಲ್ಲಿ ಸಾರ್ವಜನಿಕರು ಪಶ್ಚಿಮ ವಲಯ ಕಚೇರಿ ದೂರವಾಣಿ ಸಂಖ್ಯೆ: 080-23153259 ಹಾಗೂ ಉಚಿತ ಸಹಾಯವಾಣಿ 1967 ಗೆ ಸಂಪರ್ಕಿಸಬಹುದು.

ಸಾರ್ವಜನಿಕರು ಹಾಗೂ ಪಡಿತರ ಚೀಟಿದಾರರು ಈ ಪ್ರಕ್ರಿಯೆಗೆ ಸಂಪೂರ್ಣ ಸಹಕರಿಸಬೇಕಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬೆಂಗಳೂರು ಪಶ್ಚಿಮ ವಲಯದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


Share

You cannot copy content of this page