ಸಮಗ್ರ ಸುದ್ದಿ

ಕಾರ್ಮಿಕ ಕಾನೂನುಗಳ ಸರಳೀಕರಣ – ಭಾರತ ಸರ್ಕಾರದಿಂದ ನಾಲ್ಕು ಕಾರ್ಮಿಕ ಸಂಹಿತೆಗಳು ಜಾರಿ

Share

ಬೆಂಗಳೂರು :ಕಾರ್ಮಿಕರಿಗೆ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಜಾಗತಿಕ ಮಾನದಂಡಗಳೊಂದಿಗೆ ಭಾರತದ ಕಾರ್ಯಪಡೆ / ಕಾರ್ಮಿಕ ಪರಿಸರ ವ್ಯವಸ್ಥೆಗೆ ಉತ್ತಮ ವೇತನ, ಸುರಕ್ಷತೆ, ಸಾಮಾಜಿಕ ಭದ್ರತೆ ಮತ್ತು ವರ್ಧಿತ ಕಲ್ಯಾಣಕ್ಕಾಗಿ ಕಾರ್ಮಿಕ ಕಾನೂನುಗಳನ್ನು ಸರಳಗೊಳಿಸಲು ಮತ್ತು ಸುಗಮಗೊಳಿಸಲು ಭಾರತ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ಘೋಷಿಸಿದೆ.

ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 2025ನ್ನು ನವೆಂಬರ್ 21 ರಿಂದ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ.

ಪ್ರಸ್ತುತ ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ಪುನರ್ ವಿಮರ್ಶಿಸಿ, ಕಾರ್ಮಿಕ ನಿಯಮಾವಳಿಗಳನ್ನು ಆಧುನೀಕರಿಸಿ, ಕಾರ್ಮಿಕರ ಕಲ್ಯಾಣವನ್ನು ಹೆಚ್ಚಿಸುವ ಮೂಲಕ ಮತ್ತು ಅಭಿವೃದ್ಧಿ ಹೊಂದುತ್ತಿರುವ ಔದ್ಯೋಗಿಕ ಪ್ರಪಂಚದೊಂದಿಗೆ ಕಾರ್ಮಿಕ ಪರಿಸರ ವ್ಯವಸ್ಥೆಯನ್ನು ಜೋಡಿಸುವ ಮೂಲಕ ಈ ಮಹತ್ವದ ಕ್ರಮವು ನಿರ್ಭರ ಭಾರತದ ಭವಿಷ್ಯದ ಸಿದ್ಧ ಕಾರ್ಯಪಡೆ ಮತ್ತು ಕಾರ್ಮಿಕ ಸುಧಾರಣೆಗಳನ್ನು  ಉತ್ತೇಜಿಸುವ ಬಲವಾದ ಸ್ಥಿತಿಸ್ಥಾಪಕ ಕೈಗಾರಿಕೆಗಳಿಗೆ ಅಡಿಪಾಯವನ್ನು ಹಾಕುತ್ತದೆ.

ಭಾರತದ ಅನೇಕ ಕಾರ್ಮಿಕ ಕಾನೂನುಗಳನ್ನು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಆರಂಭದಲ್ಲಿ ಆರ್ಥಿಕತೆ ಮತ್ತು ಔದ್ಯೋಗಿಕ ಪ್ರಪಂಚ ಮೂಲಭೂತವಾಗಿ ಭಿನ್ನವಾಗಿದ್ದ ಸಮಯದಲ್ಲಿ ರೂಪಿಸಲಾಯಿತು.

ಇತ್ತೀಚಿನ ದಶಕಗಳಲ್ಲಿ ಹೆಚ್ಚಿನ ಪ್ರಮುಖ ಆರ್ಥಿಕತೆಗಳು ತಮ್ಮ ಕಾರ್ಮಿಕ ನಿಯಮಗಳನ್ನು ನವೀಕರಿಸಿವೆ ಮತ್ತು ಕ್ರೋಢೀಕರಿಸಿವೆ. ಆದರೆ ಭಾರತವು 29 ಕೇಂದ್ರ ಕಾರ್ಮಿಕ ಕಾನೂನುಗಳಲ್ಲಿ  ಹರಡಿರುವ ವಿಭಜಿತ ಸಂಕೀರ್ಣ ಮತ್ತು ಹಲವಾರು ಹಳೆಯದಾದ ನಿಬಂಧನೆಗಳ ಅಡಿಯಲ್ಲಿ  ಕಾರ್ಯನಿರ್ವಹಿಸುತ್ತಲೇ ಇದೆ.  ಈ ನಿರ್ಬಂಧಿತ ಚೌಕಟ್ಟುಗಳು ಬದಲಾಗುತ್ತಿರುವ ಆರ್ಥಿಕ ಸುಧಾರಣೆಗಳು ಮತ್ತು ಬಳೆಯುತ್ತಿರುವ ಉದ್ಯೋಗದ ರೂಪಗಳೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಹೆಣಗಾಡುತ್ತಿದ್ದವು. ಅನಿಶ್ಚತತೆಯನ್ನು ಸೃಷ್ಟಿಸಿ, ಕಾರ್ಮಿಕರು ಮತ್ತು ಉದ್ಯಮಗಳೆರಡಕ್ಕೂ ಅನುಸರಣೆಯ ಹೊರೆಯನ್ನು ಹೆಚ್ಚಿಸಿದವು.

ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನವು ವಸಾಹತುಶಾಹಿ ಯುಗದ ರಚನೆಗಳನ್ನು ಮೀರಿ ಆಧುನಿಕ ಜಾಗತಿಕ ಪ್ರವೃತ್ತಿಗಳೊಂದಿಗೆ ಹೊಂದಿಕೊಳ್ಳುವ ಈ ದೀರ್ಘಕಾಲದ ಅಗತ್ಯವನ್ನು ಪರಿಹರಿಸುತ್ತದೆ. ಒಟ್ಟಾರೆ ಈ ಸಂಹಿತೆಗಳು ಕಾರ್ಮಿಕರು ಮತ್ತು ಉದ್ಯಮಗಳೆರಡಕ್ಕೂ ಅಧಿಕಾರವನ್ನು ನೀಡುತ್ತವೆ. ಹೆಚ್ಚು ಸ್ಥಿತಿಸ್ಥಾಪಕ, ಸ್ಪರ್ಧಾತ್ಮಕ ಮತ್ತು ಅಭಿವೃದ್ಧಿ ಹೊಂದುತ್ತಿರುವ ಔದ್ಯೋಗಿಕ ಪ್ರಪಂಚದೊಂದಿಗೆ ಸ್ವಾವಲಂಬಿ ರಾಷ್ಟ್ರದ  ಸುರಕ್ಷಿತ, ಉತ್ಪಾದಕ ಮತ್ತು ಹೊಂದಿಕೆಯಾಗುವ ಕಾರ್ಯಪಡೆಯನ್ನು ನಿರ್ಮಿಸುತ್ತದೆ ಎಂದು ಕಾರ್ಮಿಕ ರಾಜ್ಯ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ರಾಜ್ಯ ವಿಮಾ ನಿಗಮದ ಹತ್ತಿರದ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಕರ್ನಾಟಕ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಬಹುದು.


Share

You cannot copy content of this page