ಸಮಗ್ರ ಸುದ್ದಿ

SAS ಆಸ್ತಿ ತೆರಿಗೆ ಐಡಿ ಬಳಸಿ ಆನ್‌ಲೈನ್‌ನಲ್ಲಿ ಇ-ಖಾತಾಡೌನ್‌ಲೋಡ್ ಮಾಡುವ ವ್ಯವಸ್ಥೆ ಜಾರಿ : ಮಹೇಶ್ವರ್ ರಾವ್

Share

ಬೆಂಗಳೂರು:ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಇ-ಖಾತಾ ಅನ್ನು ನಿಮ್ಮ SAS (Self-Assessment Scheme) ಆಸ್ತಿ ತೆರಿಗೆ ಐಡಿ ಬಳಸಿ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ತಿಳಿಸಿದ್ದಾರೆ.

ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ರವರ ದೃಷ್ಟಿ ಮತ್ತು ಮಾರ್ಗದರ್ಶನದಂತೆ, ಬೆಂಗಳೂರು ನಗರದ 5 ನಗರ ಪಾಲಿಕೆಗಳು ನಾಗರಿಕರ ಸೌಲಭ್ಯಕ್ಕಾಗಿ SAS ಪ್ರಾಪರ್ಟಿ ತೆರಿಗೆ ಐಡಿ ಬಳಸಿ ಇ-ಖಾತಾವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿವೆ.

ಸುಮಾರು 13 ಲಕ್ಷ ಇ-ಖಾತಾಗಳನ್ನು ತಕ್ಷಣವೇ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವುದು ಹಾಗೂ ಅನಗತ್ಯ ವಿಳಂಬ ಮತ್ತು ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

ವೆಬ್ ಸೈಟ್ ಗೆ ಭೇಟಿ ನೀಡಿ: https://BBMPeAasthi.karnataka.gov.in,
ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗಿನ್ ಮಾಡಿ,
ನಿಮ್ಮ SAS ಅಪ್ಲಿಕೇಶನ್ ಪ್ರಾಪರ್ಟಿ ತೆರಿಗೆ ಐಡಿಯನ್ನು ನಮೂದಿಸಿ‌. ತಕ್ಷಣವೇ ನಿಮ್ಮ ಇ-ಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ‌

ಪ್ರಮುಖ ಅಂಶಗಳು:

ಇದು ನಾಗರಿಕರನ್ನು ಮಾಲೀಕರ ಹೆಸರನ್ನು ಬಳಸಿಕೊಂಡು ಕಷ್ಟಕರವಾದ ಹುಡುಕಾಟದಿಂದ ನಾಗರಿಕರಿಗೆ ಮುಕ್ತಗೊಳಿಸುತ್ತದೆ.

ನಗರ ಪಾಲಿಕೆಗಳ ಕಚೇರಿಗಳಿಗೆ ಭೇಟಿ ನೀಡದೇ, ಯಾವುದೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ಲಭ್ಯ.ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS / WhatsApp ಮೂಲಕ ಡೌನ್‌ಲೋಡ್ ಲಿಂಕ್ ಲಭ್ಯ.

ಬೆಂಗಳೂರು ನಗರ ಪಾಲಿಕೆಗಳ ಸಿಬ್ಬಂದಿ ಅಥವಾ ಅಧಿಕಾರಿಗಳನ್ನು ಭೇಟಿ ಮಾಡುವುದಾಗಲಿ, ಸಂಪರ್ಕಿಸುವ ಅಗತ್ಯವಿಲ್ಲ. ಮಧ್ಯವರ್ತಿಗಳನ್ನು ಬಳಸಿಕೊಳ್ಳಬೇಡಿ. ಕೇವಲ ಆನ್‌ಲೈನ್ ವ್ಯವಸ್ಥೆಯನ್ನು ಬಳಸಿರಿ.

ಮುಖ್ಯ ಸೂಚನೆ:

ಈ ಇ-ಖಾತಾಗಳು ಪ್ರಸ್ತುತ ದಾಖಲೆಗಳ ಆಧಾರದ ಮೇಲೆ “As-Is-Where-Is” ತತ್ವದಡಿ ನೀಡಲಾಗುತ್ತದೆ

ಇ-ಖಾತಾವನ್ನು ಸಂಪೂರ್ಣಗೊಳಿಸಲು ಹಾಗೂ ಉಪ ನೋಂದಣಿ ಕಚೇರಿಯಲ್ಲಿ ವ್ಯವಹಾರ ನಡೆಸಲು, ಕೆಳಗಿನ ವಿವರಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸುವುದು ಅಗತ್ಯ.

ಮಾಲೀಕರ ಆಧಾರ್ ಮತ್ತು e-KYC. ನೋಂದಾಯಿತ ಮಾರಾಟ ದಸ್ತಾವೇಜು (Sale Deed). ಆಸ್ತಿ ವಿವರಗಳು (GPS ಮತ್ತು ಫೋಟೋ). BESCOM ಐಡಿ (ಅನ್ವಯಿಸಿದಲ್ಲಿ)

ನಾಗರಿಕರಿಗೆ ಲಾಭಗಳು:

ದಿನದ 24 ಗಂಟೆ (24×7) ಆನ್‌ಲೈನ್‌ನಲ್ಲಿ ಆಸ್ತಿ ದಾಖಲೆಗಳಿಗೆ ವೇಗವಾದ ಮತ್ತು ಸುಲಭ ಪ್ರವೇಶ. ಪಾರದರ್ಶಕ ಮತ್ತು ಡಿಜಿಟಲ್ ವ್ಯವಸ್ಥೆ. ಮಧ್ಯವರ್ತಿಗಳ ಅಥವಾ ಕಛೇರಿಗಳಿಗೆ ಭೇಟಿಯ ಅಗತ್ಯವಿಲ್ಲ.

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಎಲ್ಲಾ ಆಸ್ತಿ ಮಾಲೀಕರು ತಮ್ಮ ಇ-ಖಾತಾವನ್ನು ಸಾಧ್ಯವಾದಷ್ಟು ಬೇಗ ಡೌನ್‌ಲೋಡ್ ಮಾಡಿಕೊಳ್ಳುವಂತೆ ಅವರು ವಿನಂತಿಸಿದ್ದಾರೆ.


Share

You cannot copy content of this page