ಸಮಗ್ರ ಸುದ್ದಿ

ಗ್ರಾಮೀಣ ಕುಡಿಯುವ ನೀರು ತುರ್ತು ಕಾಮಗಾರಿಗಳಿಗೆ ಜಿಲ್ಲೆಗಳಿಗೆ ರೂ. 4500 ಲಕ್ಷ ಅನುದಾನ ಹಂಚಿಕೆ: ಸಚಿವ ಪ್ರಿಯಾಂಕ್ ಖರ್ಗೆ

Share

ಬೆಂಗಳೂರು: ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ಸ್ವಚ್ಛತಾ ಇಲಾಖೆ ವತಿಯಿಂದ 2026–27ನೇ ಸಾಲಿನ ರಾಜ್ಯ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಜನರಿಗೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ಎದುರಾದಲ್ಲಿ ಟ್ಯಾಂಕರಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯಲು ಹಾಗೂ ಇತರೆ ತುರ್ತು ಕ್ರಮಗಳಿಗೆ 4,500 ಲಕ್ಷ ರೂ. ಅನುದಾನವನ್ನು ವಿವಿಧ ಜಿಲ್ಲೆಗಳಿಗೆ ಅಗತ್ಯನುಸಾರ ಹಂಚಿಕೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಅನುದಾನದಲ್ಲಿ ಸಾಮಾನ್ಯ ವೆಚ್ಚಕ್ಕೆ 3415.50 ಲಕ್ಷ ರೂ., ಪರಿಶಿಷ್ಟ ಜಾತಿ ಉಪಯೋಜನೆ (ಎಸ್.ಸಿ.ಪಿ) ಅಡಿ 771.75 ಲಕ್ಷ ರೂ. ಹಾಗೂ. ಹಾಗೂ ಪರಿಶಿಷ್ಟ ಪಂಗಡಗಳ ಉಪಯೋಜನೆ (ಟಿ.ಎಸ್.ಪಿ) ಅಡಿ 312.75 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನಿಡಿದ್ದಾರೆ.

ಜಿಲ್ಲಾವಾರು ಅನುದಾನ ವಿವರಗಳು (ರೂ. ಲಕ್ಷಗಳಲ್ಲಿ):

  1. ಬಾಗಲಕೋಟೆ – 150.00
  2. ಬೆಂಗಳೂರು – 150.00
  3. ಬೆಳಗಾವಿ – 200.00
  4. ಬೆಂಗಳೂರು (ಗ್ರಾ) – 150.00
  5. ಬೆಂಗಳೂರು (ನಗರ) – 150.00
  6. ಬೀದರ – 150.00
  7. ಚಾಮರಾಜನಗರ – 150.00
  8. ಚಿಕ್ಕಬಳ್ಳಾಪುರ – 150.00
  9. ಚಿಕ್ಕಮಗಳೂರು – 150.00
  10. ಚಿತ್ರದುರ್ಗ – 150.00
  11. ದಕ್ಷಿಣ ಕನ್ನಡ – 100.00
  12. ದಾವಣಗೆರೆ – 100.00
  13. ಧಾರವಾಡ – 100.00
  14. ಗದಗ – 100.00
  15. ಹಾಸನ – 150.00
  16. ಹಾವೇರಿ – 150.00
  17. ಕಲಬುರಗಿ – 200.00
  18. ಕೊಡಗು – 100.00
  19. ಕೋಲಾರ – 200.00
  20. ಕೊಪ್ಪಳ – 150.00
  21. ಮಂಡ್ಯ – 100.00
  22. ಮೈಸೂರು – 150.00
  23. ರಾಯಚೂರು – 200.00
  24. ರಾಮನಗರ – 200.00
  25. ಶಿವಮೊಗ್ಗ – 150.00
  26. ತುಮಕೂರು – 100.00
  27. ಉಡುಪಿ – 200.00
  28. ಉತ್ತರ ಕನ್ನಡ – 100.00
  29. ವಿಜಯನಗರ – 150.00
  30. ವಿಜಯಪುರ – 150.00
  31. ಯಾದಗಿರಿ – 150.00

ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗುವ ಕುಡಿಯುವ ನೀರಿನ ತುರ್ತು ಸಮಸ್ಯೆಗಳನ್ನು ನಿವಾರಿಸಲು ಟ್ಯಾಂಕರ್ ಮೂಲಕ ಹಾಗೂ ಬಾಡಿಗೆ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲು ಆದ್ಯತೆ ನೀಡಬೇಕು, ಸ್ಥಗಿತಗೊಂಡಿರುವ ಕೊಳವೆಬಾವಿಗಳನ್ನು ಫ್ಲಶಿಂಗ್ / redrilling / hydrofracturing ಮೂಲಕ ಆಳಗೊಳಿಸಲು ಪ್ರಯತ್ನಿಸಬೇಕು, ಅನಿವಾರ್ಯವಾದಲ್ಲಿ ಮಾತ್ರ ಭೂವಿಜ್ಞಾನಿಗಳ ಸಲಹೆ ಮೇರೆಗೆ ಹೊಸ ಕೊಳವೆಬಾವಿ ಕೊರೆಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ಹಾಗೂ ಇಂಥ ಕ್ರಮಗಳಿಗೆ Task Force ಸಮಿತಿಯಲ್ಲಿ ಅನುಮೋದನೆಯನ್ನು ಪಡೆಯಲು ಸಿಇಓ ಗಳಿಗೆ ತಿಳಿಸಲಾಗಿದೆ.

ಯೋಜನೆಗಳ ಅನುಷ್ಠಾನದಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕಾರ್ಯಗಳ ಪ್ರಗತಿಯನ್ನು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಿಸಿದ ಇಂಜಿನಿಯರ್‌ಗಳು ನಿಯಮಿತವಾಗಿ ಪರಿಶೀಲಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.

ಈ ಕ್ರಮದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆ ಹೆಚ್ಚಾಗಿ, ಸಾರ್ವಜನಿಕ ಆರೋಗ್ಯ ಮತ್ತು ಜೀವನಮಟ್ಟದಲ್ಲಿ ಮಹತ್ವದ ಸುಧಾರಣೆ ಕಾಣಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿವರವಾದ ಆದೇಶವನ್ನು ಗ್ರಾಮೀಣ ನೀರು ಸರಬರಾಜು ಇಲಾಖೆ ಹೊರಡಿಸಿದ್ದು ಅಧಿಕಾರಿಗಳಿಗೆ ರವಾನಿಸಿದೆ.


Share

You cannot copy content of this page