ಸಮಗ್ರ ಸುದ್ದಿ

ಮೇ 9 ರಂದು ಯುಹೆಚ್ಎಸ್ ತೋಟಗಾರಿಕೆ ಸಂತೆ

Share

ಬೆಂಗಳೂರು: ಇಲ್ಲಿನ ವಿದ್ಯಾರಣ್ಯಪುರದ ಯಲಹಂಕ ರಸ್ತೆಯ ದೊಡ್ಡಬೆಟ್ಟಹಳ್ಳಿ ಬಸ್‌ ನಿಲ್ದಾಣ ಹತ್ತಿರದ ಜಿಕೆವಿಕೆಯ
ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರ ಮೇ 09 ರಂದು ಬೆಳಿಗ್ಗೆ 07.00 ರಿಂದ ಮಧ್ಯಾಹ್ನ 02.00 ಗಂಟೆಯವರೆಗೆ “ಯುಹೆಚ್‌ಎಸ್ ಸಂತೆ” ನಡೆಯಲಿದೆ.

ಈ ಸಂತೆಯಲ್ಲಿ ಸುತ್ತಮುತ್ತಲ ಜಿಲ್ಲೆಗಳ ರೈತರು ಬೆಳೆದ ವಿವಿಧ ತರಕಾರಿ, ಹಣ್ಣು, ಹೂವು, ಸಾಂಬಾರು ಪದಾರ್ಥಗಳು ಹಾಗೂ ಇತರೆ ಮೌಲ್ಯವರ್ಧಿತ ಉತ್ಪನ್ನಗಳನ್ನು ರೈತರಿಂದ ನೇರ ಮಾರಾಟ ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ರೈತರಿಗೆ ಮತ್ತು ನಗರ ವಾಸಿಗಳಿಗೆ ಅನುಕೂಲವಾಗುವಂತೆ ಹಲವಾರು ರೀತಿಯ ಹಣ್ಣಿನ ಗಿಡಗಳು ಮತ್ತು ಅಲಂಕಾರಿಕ ಸಸ್ಯಗಳು ಮಾರಾಟಕ್ಕೆ ಲಭ್ಯವಿರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ಎಸ್‌.ಎಲ್‌‌.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page