ಬೆಂಗಳೂರು: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಗೆಡ್ಡೆಗೆಣಸು ಬೆಳೆಗಳ ಮೇಲಿನ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ , ಕೇಂದ್ರಿಯ ಗೆಡ್ಡೆಗೆಣಸು ಬೆಳೆಗಳ ಸಂಶೋಧನಾ ಸಂಸ್ಥೆ, ತಿರುವನಂತಪುರಂ ಇವರ ಸಹಯೋಗದಲ್ಲಿ 26 ನೇ ವಾರ್ಷಿಕ ಸಾಮಾನ್ಯ ಸಭೆಯು ಮೇ 21 ರಂದು ಬೆಂಗಳೂರಿನ ಜಿಕೆವಿಕೆ ಆವರಣದ ಯುಹೆಚ್‌ಎಸ್ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಪ್ರಾಭವಾಗಿದೆ.ಮೇ.23 ರವರೆಗೆ ಜರುಗಲಿದೆ.
ಈ ವಾರ್ಷಿಕ ಸಭೆಯಲ್ಲಿ ಭಾರತದಾದ್ಯಂತ ಗೆಡ್ಡೆಗೆಣಸು ಬೆಳೆಗಳ ಎಐಸಿಆರ್‌ಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಸಂಶೋಧನಾ ಫಲಿತಾಂಶಗಳು ಮತ್ತು ತಂತ್ರಜ್ಞಾನಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.
ಗುರುವಾರ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ(ತೋಟಗಾರಿಕೆ ವಿಜ್ಞಾನ)ಉಪ ಮಹಾ ನಿರ್ದೇಶಕ ಡಾ. ಸಂಜಯ್ ಕುಮಾರ್ ಸಿಂಗ್, ಇವರು ಗೆಡ್ಡೆಗೆಣಸುಗಳ ಗೊಂಚಲನ್ನು ಅನಾವರಣಗೊಳಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಹೆಚ್ಚು ಹೆಚ್ಚು ರೋಗ ನಿರೋಧಕ ಹಾಗೂ ಉತ್ತಮ ಗುಣಮಟ್ಟದ ತಳಿಗಳನ್ನು ಅಭಿವೃದ್ದಿ ಪಡಿಸಲು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ವಿಷ್ಣುವರ್ಧನ್ ಮಾತನಾಡಿ, ಈ ಗೆಡ್ಡೆಗೆಣಸುಗಳು ರೈತರಿಗೆ ಒಂದು ಸುಸ್ಥಿರ ಆದಾಯವನ್ನು ನೀಡುವುದರ ಜೊತೆಗೆ ಉತ್ತಮ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ಬೆಳೆಯು ಹವಾಮಾನ ವೈಪರೀತ್ಯ ಗಳನ್ನು ಸಲಭವಾಗಿ ತಡೆಯುವ ಶಕ್ತಿಯನ್ನು ಹೊಂದಿದ್ದು, ಉತ್ತಮ ಇಳುವರಿಯನ್ನು ನೀಡುವ ಬೆಳೆಗಳಾಗಿವೆ. ಆದ್ದರಿಂದ ಈ ಬೆಳೆಗಳನ್ನು ಹೆಚ್ಚು ಹೆಚ್ಚು ಕೃಷಿ ವ್ಯವಸ್ಥೆಯಲ್ಲಿ ಅಳವಡಿಸಲು ರೈತರನ್ನು ಪ್ರೇರೆಪಿಸಬೇಕೆಂದು ವಿಜ್ಞಾನಿಗಳಿಗೆ ಕರೆ ನೀಡಿದರು.
ಅಥಿತಿಗಳಾಗಿ ತೋವಿವಿ ಸಂಶೋಧನಾ ನಿರ್ದೇಶಕ ಡಾ. ಬಿ. ಫಕ್ರುದ್ದೀನ್, ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಂ. ಪ್ರಭಾಕರ್, ಐಸಿಎಆರ್ ಸಹಾಯಕ ಮಹಾನಿರ್ದೇಶಕರು ಡಾ. ಸುಧಾಕರ್ ಪಾಂಡೆ, ನಿರ್ದೇಶಕ ಡಾ. ಟಿ. ಕೆ. ಬೆಹೆರಾ ಉಪಸ್ಥಿತರಿದ್ದರು.
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ.ವೆಂಕಟೇಶಲು ಸ್ವಾಗತಿಸಿದರು. ತಿರುವನಂತಪುರಂ ಕೇಂದ್ರಿಯ ಗೆಡ್ಡೆಗೆಣಸು ಬೆಳೆಗಳ ಸಂಶೋಧನಾ ಸಂಸ್ಥೆಯ ಡಾ.ಜಿ.ಬೈಜು ಚಟುವಟುಕೆಗಳ ವರದಿಯನ್ನು ಪ್ರಸ್ತುತ ಪಡಿಸಿದರು, ಡಾ. ಕೆ. ರಾಮಚಂದ್ರ ನಾಯಕ್ ತೋಟಗಾರಿಕಾ ಮಹಾವಿದ್ಯಾಲಯ ಡೀನ್ ಡಾ.ರಾಮಚಂದ್ರ ನಾಯ್ಕ ವಂದಿಸಿದರು.
ದೇಶದ ವಿವಿಧ ಭಾಗಗಲ್ಲಿರುವ ಎಐಸಿಆರ್‌ಪಿ ಕೇಂದ್ರಗಳಿಂದ ಸುಮಾರು 60 ವಿಜ್ಞಾನಿಗಳು ಮತ್ತು ತೋಟಗಾರಿಕಾ ಮಹಾವಿದ್ಯಾಲಯದ ವಿಜ್ಞಾನಿಗಳು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು.
