ಬೆಂಗಳೂರು :ಕರ್ನಾಟಕ ರಾಜ್ಯಪಾಲರ ಸಚಿವಾಲಯವು, “ರಾಜ ಭವನ, ಕರ್ನಾಟಕ” ಅನ್ನು ಅಧಿಕೃತವಾಗಿ “ಲೋಕ ಭವನ, ಕರ್ನಾಟಕ” ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ.
ಈ ಬದಲಾವಣೆಯನ್ನು ಭಾರತ ಸರ್ಕಾರದ ಗೃಹ ಸಚಿವಾಲಯದ ಸಂವಾದ (ಮೆಮೊ ನಂ. 7/10/2025 (ಭಾಗ)-ಒ&ಉ, ದಿನಾಂಕ 25-11-2025) ಆದೇಶದನುಸಾರವಾಗಿ ಮಾಡಲಾಗಿದ್ದು, ಕರ್ನಾಟಕದ ಮಾನ್ಯ ರಾಜ್ಯಪಾಲರ ಅನುಮೋದನೆಯನ್ನು ಪಡೆದು, ತಕ್ಷಣದಿಂದ ಜಾರಿಗೆ ಬರಲಿದೆ.
ತಕ್ಷಣದಿಂದಲೇ ಎಲ್ಲಾ ಅಧಿಕೃತ ದಾಖಲೆಗಳು, ಸಂವಹನಗಳು ಮತ್ತು ಉಲ್ಲೇಖಗಳಲ್ಲಿ ಹೊಸ ಹೆಸರು “ಲೋಕ ಭವನ, ಕರ್ನಾಟಕ” ಅನ್ನು ಬಳಸಬೇಕು. ಎಲ್ಲಾ ಇಲಾಖೆ ಮತ್ತು ಅಧಿಕಾರಿಗಳು ತಮ್ಮ ದಾಖಲೆಗಳು, ಲೆಟರ್ ಹೆಡ್‍ಗಳು, ವೆಬ್‍ಸೈಟ್‍ಗಳು ಮತ್ತು ಇತರ ಸಂವಹನಗಳಲ್ಲಿ ಈ ಬದಲಾವಣೆಯನ್ನು ಅನ್ವಯಿಸಬೇಕು ಎಂದು ಸೂಚನೆ ನೀಡಲಾಗಿದೆ.
