ಬೆಂಗಳೂರು :ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಗ್ರೂಪ್-ಸಿ ವೃಂದದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ‘ಉಳಿಕೆ ಮೂಲ ವೃಂದದ’ 150 ಹುದ್ದೆಗಳಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ.
ಅಂತಿಮ ಆಯ್ಕೆಪಟ್ಟಿಯನ್ನು ಜುಲೈ 18 ರಂದು ಆಯೋಗದ ಅಧಿಕೃತ ವೆಬ್‍ಸೈಟ್: http://kpsc.kar.nic.in-Lists – Final Selection List ಮತ್ತು ಕಟ್ ಅಪ್ ಅಂಕಗಳ ಆಯ್ಕೆಪಟ್ಟಿಯನ್ನು http://kpsc.kar.nic.in-Lists – Cut-off Lists ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜ್ಯೋತಿ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
