ಶಿಕ್ಷಣ / ಉದ್ಯೋಗ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಶಾಖಾಧಿಕಾರಿ ಹುದ್ದೆಗಳ ನೇರ ನೇಮಕಾತಿ: ಆನ್‍ಲೈನ್ ಅರ್ಜಿ ಆಹ್ವಾನ

Share

ಬೆಂಗಳೂರು:ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅದರ ವ್ಯಾಪ್ತಿಯ ಕಛೇರಿಗಳಲ್ಲಿ ಖಾಲಿ ಇರುವ ಉಳಿದ ಮೂಲ ವೃಂದದ 18 ಮತ್ತು ಕಲ್ಯಾಣ ಕರ್ನಾಟಕದ ವೃಂದದ 02 ಶಾಖಾಧಿಕಾರಿ ಹುದ್ದೆಗಳ ಭರ್ತಿಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆ 2026 ಜುಲೈ 20 ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು 2026 ಆಗಸ್ಟ್  19 ಕೊನೆಯ ದಿನಾಂಕವಾಗಿದೆ.

ಖಾಲಿ ಹುದ್ದೆಗಳ ವರ್ಗೀಕರಣ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ ಮತ್ತು ಪರೀಕ್ಷಾ ವಿವರಗಳಿಗಾಗಿ ಕರ್ನಾಟಕ ಪ್ರಾಧಿಕಾರದ ವೆಬ್‍ಸೈಟ್ https://cetonline.karnataka.gov.in/kea/indexnew  ಅಥವಾ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವೆಬ್ ಸೈಟ್ https://karnataka.nalsa.gov.in  ಗಳಿಗೆ ಭೇಟಿ ನೀಡಬಹುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಹೆಚ್. ಶಶಿಧರ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page