ಬೆಂಗಳೂರು: ಕರ್ನಾಟಕ ಸರ್ಕಾರದ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು (ಇಎಸ್‍ಐಎಸ್) ಇಲಾಖೆಯ ರಾಜಾಜಿನಗರದಲ್ಲಿರುವ ಆಯುಕ್ತಾಲಯದಲ್ಲಿ ಖಾಲಿ ಇರುವ ವಿವಿಧ ಇಂಜಿನಿಯರಿಂಗ್ ಹಾಗೂ ಐಟಿ ಹುದ್ದೆಗಳನ್ನು 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನೇರ ಸಂದರ್ಶನವು 2026 ನೇ ಜುಲೈ 27 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಬೆಂಗಳೂರಿನ ರಾಜಾಜಿನಗರದ 2ನೇ ಬ್ಲಾಕ್‍ನಲ್ಲಿರುವ ಇಎಸ್‍ಐಎಸ್ ವೈದ್ಯಕೀಯ ಸೇವೆಗಳ ಆಯುಕ್ತಾಲಯದ ಕಚೇರಿಯಲ್ಲಿ ನಡೆಯಲಿದೆ.
ಐಟಿ ಮ್ಯಾನೇಜರ್ (01 ಹುದ್ದೆ): ಬಿಇ, (ಸಿಎಸ್./ಎಐ/ಎಂ.ಎಲ್./ಡಿ.ಎಸ್./ಇ&ಸಿ/ಐಎಸ್) ಜೊತೆಗೆ 3 ವರ್ಷಗಳ ವೃತ್ತಿಪರ ಅನುಭವ ಹೊಂದಿರಬೇಕು. ರೂ.65,000/- ಸಂಬಳ ನಿಗದಿಪಡಿಸಲಾಗಿದೆ.
ಎಲೆಕ್ಟ್ರಿಕಲ್ ಇಂಜಿನಿಯರ್ (01 ಹುದ್ದೆ): ಬಿಇ/ಎಂಇ/ಎಂ.ಟೆಕ್ (ಎಲೆಕ್ಟ್ರಿಕಲ್) ಜೊತೆಗೆ 5 ವರ್ಷಗಳ ವೃತ್ತಿಪರ ಅನುಭವ ಹೊಂದಿರಬೇಕು. ರೂ.75,000/- ಸಂಬಳ ನಿಗದಿಪಡಿಸಲಾಗಿದೆ.
ಸಿವಿಲ್ ಇಂಜಿನಿಯರ್ (01 ಹುದ್ದೆ): ಬಿಇ/ಎಂಇ/ಎಂ.ಟೆಕ್ (ಸಿವಿಲ್) ಜೊತೆಗೆ 5 ವರ್ಷಗಳ ವೃತ್ತಿಪರ ಅನುಭವ ಹೊಂದಿರಬೇಕು. ರೂ.75,000/- ಸಂಬಳ ನಿಗದಿಪಡಿಸಲಾಗಿದೆ.
ಬಯೋ ಮೆಡಿಕಲ್ ಇಂಜಿನಿಯರ್ (01 ಹುದ್ದೆ): ಬಿಇ / ಬಿ.ಟೆಕ್ (ಬಯೋ ಮೆಡಿಕಲ್) ಜೊತೆಗೆ 5 ವರ್ಷಗಳ ವೃತ್ತಿಪರ ಅನುಭವ ಹೊಂದಿರಬೇಕು. ರೂ.75,000/- ಸಂಬಳ ನಿಗದಿಪಡಿಸಲಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಕನಿಷ್ಠ ವಯಸ್ಸು: 18 ವರ್ಷಗಳು ತುಂಬಿರಬೇಕು. ಸಾಮಾನ್ಯ ಅರ್ಹತೆ ಗರಿಷ್ಠ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಗರಿಷ್ಠ 43 ವರ್ಷ, ಎಸ್.ಸಿ./ಎಸ್.ಟಿ ಮತ್ತು ಪ್ರವರ್ಗ-1 ಗರಿಷ್ಠ 45 ವರ್ಷ ನಿಗದಿಪಡಿಸಿದೆ.
ಸಂದರ್ಶನಕ್ಕೆ ಹಾಜರಾಗುವಾಗ ಸ್ವಯಂ ದೃಢೀಕೃತ ನಕಲು ಪ್ರತಿಗಳೊಂದಿಗೆ ಮೂಲ ದಾಖಲೆಗಳನ್ನು ತರತಕ್ಕದ್ದು, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಶೈಕ್ಷಣಿಕ ಅರ್ಹತೆಯ ಅಂಕಪಟ್ಟಿಗಳು ಮತ್ತು ಪದವಿ ಪ್ರಮಾಣಪತ್ರಗಳು, ಜಾತಿ ಪ್ರಮಾಣಪತ್ರ (ಅನ್ವಯಿಸುವಲ್ಲಿ), ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳು, ಆಧಾರ್ ಕಾರ್ಡ್ ನಕಲು, ವೃತ್ತಿಪರ ಅನುಭವ ಪ್ರಮಾಣಪತ್ರ ಹಾಗೂ ನಡತೆ ಪ್ರಮಾಣಪತ್ರ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‍ಸೈಟ್ https://esisms.karnataka.gov.in/ ಅಥವಾ ಕಚೇರಿ ದೂರವಾಣಿ ಸಂಖ್ಯೆ 080-2332 4216 / 2332 4218 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿ
