ಸಮಗ್ರ ಸುದ್ದಿ

ಈದ್ ಮಿಲಾದ್ ಹಿನ್ನೆಲೆ ನಾಳೆ ಕೋಲಾರ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ – ಪೊಲೀಸ್ ಇಲಾಖೆ ಸೂಚನೆ

Share

​ಕೋಲಾರ: ಪವಿತ್ರ ಪ್ರವಾದಿ ಮುಹಮ್ಮದ್ ಅವರ ಜನ್ಮದಿನಾಚರಣೆ (ಈದ್ ಮಿಲಾದ್) ಹಬ್ಬದ ಪ್ರಯುಕ್ತ ನಾಳೆ ಕೋಲಾರ ನಗರದಲ್ಲಿ ವಾಹನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಪೊಲೀಸರು ಸಂಚಾರ ಮಾರ್ಗ ಬದಲಾವಣೆ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ.

ನಗರದ ಮಾಲೂರು ಜಿಗ್-ಜಾಗ್ ಸರ್ಕಲ್ ನಿಂದ ಕೋಲಾರದ ಕ್ಲಾಕ್ ಟವರ್ – ಟೇಕಲ್ ವೃತ್ತದ ವರೆಗೆ ಹಾಗೂ ಕ್ಲಾಕ್ ಟವರ್ – ಪಲ್ಲವಿ ವೃತ್ತದವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪರ್ಯಾಯ ಮಾರ್ಗವಾಗಿ ಬೆಂಗಳೂರು ಕಡೆಯಿಂದ ಕೋಲಾರ ನಗರಕ್ಕೆ ಪ್ರವೇಶಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ ಸಾಗರ್ ಹೋಟೆಲ್ ನಿಂದ ನೇರವಾಗಿ ಹೈವೇ ಮೂಲಕ ಬಂಗಾರಪೇಟೆ ವೃತ್ತ – ಮೆಕ್ಕ ವೃತ್ತ – ಅಮ್ಮವಾರಿ ಪೇಟೆ ವೃತ್ತ – ಕೆ.ಆರ್. ಸರ್ಕಲ್ ಮೂಲಕ ಬಸ್ ನಿಲ್ದಾಣ ತಲುಪಬಹುದು.

​ಮಾಲೂರು ಕಡೆಯಿಂದ ಕೋಲಾರ ನಗರಕ್ಕೆ ಪ್ರವೇಶಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ ಮಾಲೂರು ಜಿಗ್-ಜಾಗ್ ಬಳಿ ಬಲತಿರುವು ಪಡೆದು ನೇರವಾಗಿ ಹೈವೇ ಮೂಲಕ ಬಂಗಾರಪೇಟೆ ವೃತ್ತ – ಮೆಕ್ಕೆ ವೃತ್ತ – ಅಮ್ಮವಾರಿ ಪೇಟೆ ವೃತ್ತ – ಕೆ.ಆರ್. ಸರ್ಕಲ್ ಮೂಲಕ ಬಸ್ ನಿಲ್ದಾಣಕ್ಕೆ ಸಾಗಬೇಕು.

​ಕೋಲಾರ ಬಸ್ ನಿಲ್ದಾಣದ ಕಡೆಯಿಂದ ಬೆಂಗಳೂರು, ಮಾಲೂರು ಹಾಗೂ ಬಂಗಾರಪೇಟೆಗೆ ಹೋಗುವ ವಾಹನಗಳು ಕೆ.ಆರ್. ವೃತ್ತ – ಅಮ್ಮವಾರಿ ಪೇಟೆ ವೃತ್ತ – ಬಂಗಾರಪೇಟೆ ವೃತ್ತ – ಬಂಗಾರಪೇಟೆ ಜಿಗ್-ಜಾಗ್ ತಲುಪಿ ಅಲ್ಲಿಂದ ಹೈವೇ ಮೂಲಕ ಸಂಚರಿಸಬೇಕು.

​ಮುಳಬಾಗಿಲು ಕಡೆಯಿಂದ ಕೋಲಾರ ಕಡೆಗೆ ಬರುವ ವಾಹನಗಳು ಮೆಕ್ಕ ವೃತ್ತದಿಂದ ನೇರವಾಗಿ ಅಮ್ಮವಾರಿ ಪೇಟೆ ವೃತ್ತ – ಕೆ.ಆರ್. ಸರ್ಕಲ್ ಮೂಲಕ ಬಸ್ ನಿಲ್ದಾಣ ತಲುಪಬಹುದು.

​ಶ್ರೀನಿವಾಸಪುರ ಕಡೆಯಿಂದ: ಕೋಲಾರ ಕಡೆಗೆ ಬರುವ ವಾಹನಗಳು ಮೆಕ್ಕ ವೃತ್ತದಿಂದ ಬಲ ತಿರುವು ತೆಗೆದುಕೊಂಡು ಅಮ್ಮವಾರಿ ಪೇಟೆ ವೃತ್ತ – ಕೆ.ಆರ್. ಸರ್ಕಲ್ ಮೂಲಕ ಬಸ್ ನಿಲ್ದಾಣಕ್ಕೆ ತೆರಳಬಹುದು.

​ಸಾರ್ವಜನಿಕರು ಪೊಲೀಸ್ ಸೂಚನೆಗಳನ್ನು ಪಾಲಿಸಿ, ನಿಯಂತ್ರಿತ ವೇಗದಲ್ಲಿ ಸುರಕ್ಷಿತವಾಗಿ ಸಂಚರಿಸಿ ಸುಗಮ ಸಂಚಾರಕ್ಕೆ ಸಹಕರಿಸಬೇಕಾಗಿ ಜಿಲ್ಲಾ ಪೊಲೀಸ್ ಇಲಾಖೆ ವಿನಂತಿಸಿದೆ.


Share

You cannot copy content of this page