ಸಮಗ್ರ ಸುದ್ದಿ

ಶೌರ್ಯ ಪ್ರಶಸ್ತಿ ಪುರಸ್ಕೃತ ಯೋಧರಿಗೆ ಶುಭಸುದ್ದಿ: ರೈಲ್ವೆಯಲ್ಲಿ ಜೀವಮಾನಪರ್ಯಂತ ಉಚಿತ ಪ್ರಯಾಣ ಸೌಲಭ್ಯ ಘೋಷಿಸಿದ ರಕ್ಷಣಾ ಸಚಿವಾಲಯ

Share

​ನವದೆಹಲಿ: ದೇಶಕ್ಕಾಗಿ ಅಭೂತಪೂರ್ವ ಸೇವೆ ಸಲ್ಲಿಸಿ ಶೌರ್ಯ ಪ್ರಶಸ್ತಿ ಪಡೆದ ಯೋಧರು ಹಾಗೂ ಅವರ ಕುಟುಂಬದವರಿಗೆ ರಕ್ಷಣಾ ಸಚಿವಾಲಯವು ಸೇನಾ ಪದಕ, ನೌಕಾಪಡೆ ಪದಕ ಮತ್ತು ವಾಯುಪಡೆ ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಭಾರತೀಯ ರೈಲ್ವೆಯಲ್ಲಿ ಜೀವಮಾನಪರ್ಯಂತ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಕೇಂದ್ರ ಸರ್ಕಾರ ಘೋಷಿಸಿದೆ.

​ಈ ಯೋಜನೆಯಡಿ ಯೋಧರು, ಅವರ ಪತಿ ಅಥವಾ ಪತ್ನಿ ಹಾಗೂ ಮರಣೋತ್ತರವಾಗಿ ಪ್ರಶಸ್ತಿ ಪಡೆದ ಅವಿವಾಹಿತ ಯೋಧರ ತಂದೆ-ತಾಯಂದಿರು ಉಚಿತ ರೈಲು ಪ್ರಯಾಣದ ಪ್ರಯೋಜನವನ್ನು ಪಡೆಯಲಿದ್ದಾರೆ.

ಯಾವ ದರ್ಜೆಗಳಲ್ಲಿ ಪ್ರಯಾಣಿಸಬಹುದು?

ಅರ್ಹ ಫಲಾನುಭವಿಗಳು ಭಾರತೀಯ ರೈಲ್ವೆಯ ಪ್ರಥಮ ದರ್ಜೆ (First Class / 1st AC), ಎರಡನೇ ದರ್ಜೆ ಎಸಿ (Second AC), ಎಸಿ ಚೇರ್ ಕಾರ್ (AC Chair Car) ತರಗತಿಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಆನ್‌ಲೈನ್ ನೋಂದಣಿ ಹೇಗೆ?

ಸೌಲಭ್ಯವನ್ನು ಸುಲಭವಾಗಿ ಪಡೆಯಲು ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ.

​ಅರ್ಹರು ಅಧಿಕೃತ ‘ರೈಲ್ವೆ ರಿಯಾಯಿತಿ ಕಾರ್ಡ್ ಪೋರ್ಟಲ್’ (https://irccp.indianrail.gov.in/IRCCP) ಮೂಲಕ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

​ದಾಖಲೆಗಳ ಪರಿಶೀಲನೆ ಮತ್ತು ದೃಢೀಕರಣದ ನಂತರ ಫಲಾನುಭವಿಗಳಿಗೆ ಡಿಜಿಟಲ್ ‘ಇ-ಪಾಸ್’ (e-Pass) ಸಿಗಲಿದೆ.

​ಈ ಇ-ಪಾಸ್ ಬಳಸಿ ನವೆಂಬರ್ 1 ರಿಂದ ಐಆರ್‌ಸಿಟಿಸಿ (IRCTC) ವೆಬ್‌ಸೈಟ್/ಆಪ್ ಮೂಲಕ ಆನ್‌ಲೈನ್‌ನಲ್ಲಿ ಉಚಿತ ಟಿಕೆಟ್ ಬುಕ್ ಮಾಡಿಕೊಳ್ಳಬಹುದು ಎಂದು ಸಚಿವಾಲಯ ಮಾಹಿತಿ ನೀಡಿದೆ.

​ವೀರ ಯೋಧರ ತ್ಯಾಗ ಮತ್ತು ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಕೈಗೊಂಡಿರುವ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


Share

You cannot copy content of this page