ಸಮಗ್ರ ಸುದ್ದಿ

18 ವಯಸ್ಸು ಮೇಲ್ಪಟ್ಟ ಯಾರೊಬ್ಬ ಅರ್ಹ ಮತದಾರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯ ನಿರ್ವಹಿಸಿ: ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್

Share

ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ
ಅಪರ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ನಿನ್ನೆಯಿಂದ ಮತದಾರರ ನೋಂದಣಿ ವಿಶೇಷ ಅಭಿಯಾನ ಕಾರ್ಯ ನಡೆಯುತ್ತಿರುವ ಪ್ರಯುಕ್ತ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳಾದ ವಿ. ಅನ್ಬುಕುಮಾರ್ ಅವರು ಇಂದು ಶಾಂತಿನಗರ ಕ್ಷೇತ್ರದ ಶಾಂತಲಾನಗರ ವಾರ್ಡ್ ಬಾಲ್ಡ್ ವಿನ್ ಗರ್ಲ್ಸ್ ಶಾಲೆಯ ಬೂತ್ ನಂ. 47 & 48 ಕ್ಕೆ ಹಾಗೂ ಅಗರಂ ವಾರ್ಡ್ ನ ಸರ್ಕಾರಿ ತಮಿಳು & ಆಂಗ್ಲ ಪ್ರೌಢಶಾಲೆ, ಆಸ್ಟಿನ್ ಟೌನ್ ನ ಮತದಾರರ ವಿಚಾರಣೆ ಕೇಂದ್ರಕ್ಕೆ ಭೇಟಿ ನೀಡಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯದ ನೋಟೀಸ್ ಗಳ ವಿಚಾರಣೆ ಹಾಗೂ ನಮೂನೆ-6 ವಿತರಣೆ, ಮತದಾರರ ನೋಂದಣಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ರವರು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 SIR ಪ್ರಕ್ರಿಯೆಯಲ್ಲಿ 18 ವಯಸ್ಸು ಮೇಲ್ಪಟ್ಟ ಯಾರೊಬ್ಬ ಅರ್ಹ ಮತದಾರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯ ನಿರ್ವಹಿಸಲು ಬಿ.ಎಲ್.ಓ ಗಳಿಗೆ ಸೂಚನೆ ನೀಡಿದರು

ನಮೂನೆ-6 ವಿತರಣೆ

ಮುಖ್ಯ ಚುನಾವಣಾಧಿಕಾರಿ ಶ್ರೀ ವಿ. ಅನ್ಬುಕುಮಾರ್ ರವರು ಶಾಂತಿನಗರ ಕ್ಷೇತ್ರದ ಶಾಂತಲಾನಗರ ವಾರ್ಡ್ ನ ಲ್ಯಾಂಗ್ ಫೋರ್ಡ್ ರಸ್ತೆಯಲ್ಲಿನ ಅಪಾರ್ಟ್ಮೆಂಟ್ ಒಂದಕ್ಕೆ ತೆರಳಿ ನಮೂನೆ-6 ನ್ನು ವಿತರಣೆ ಮಾಡಿದರು. ಹಾಗೂ ಶಾಂತಿನಗರ ಕ್ಷೇತ್ರದ ಶಾಂತಲಾನಗರ ವಾರ್ಡ್ ಬಾಲ್ಡ್ ವಿನ್ ಗರ್ಲ್ಸ್ ಶಾಲೆಯ ಬೂತ್ ನಂ. 47 & 48 ಕ್ಕೆ ಹಾಗೂ ಅಗರಂ ವಾರ್ಡ್ ನ ಸರ್ಕಾರಿ ತಮಿಳು & ಆಂಗ್ಲ ಪ್ರೌಢಶಾಲೆ, ಆಸ್ಟಿನ್ ಟೌನ್ ಇಲ್ಲಿ ನಡೆಯುತ್ತಿರುವ ಮತದಾರರ ವಿಚಾರಣೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಗಮಿಸಿದ್ದ ಹಲವು ಸಾರ್ವಜನಿಕರಿಗೆ ನಮೂನೆ-6 ಅರ್ಜಿಗಳನ್ನು ವಿತರಣೆ ಮಾಡಿದರು ಹಾಗೂ ಅರ್ಜಿಗಳನ್ನು ಭರ್ತಿ ಮಾಡಲು ಸಂದೇಹಗಳಿದ್ದಲ್ಲಿ ಅವರಿಗೆ ಸಹಾಯ ಮಾಡಲು ಸ್ಥಳದಲ್ಲಿದ್ದ ಕಂದಾಯ ವಿಭಾಗದ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕಕರೊಂದಿಗೆ ಸಂಯಮದಿಂದ ವರ್ತಿಸಲು ಸೂಚನೆ

ಪ್ರತಿಯೊಬ್ಬ ಮತದಾರರು ಈ ದೇಶದ ಅತ್ಯಮೂಲ್ಯ ಆಸ್ತಿ. ಅವರಿಗೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು, ಮತದಾನ ಮಾಡಲು ಮತದಾರರ ಚೀಟಿ ಅತ್ಯಗತ್ಯವಿದ್ದು, ಅದನ್ನು ಪಡೆಯಲು ಅರ್ಹತೆ ಹೊಂದಿದ ಪ್ರತಿಯೊಬ್ಬರೂ ಹಕ್ಕು ಹೊಂದಿರುತ್ತಾರೆ ಹಾಗೂ ಅರ್ಹರನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕಾಗಿರುವುದು ಎಸ್.ಐ.ಆರ್ ಪ್ರಕ್ರಿಯೆಯ ಉದ್ದೇಶವಾಗಿದ್ದು, ಈ ಉದ್ದೇಶಕ್ಕಾಗಿ ಮತದಾರರ ವಿಚಾರಣೆ ಕೇಂದ್ರಗಳಿಗೆ ಆಗಮಿಸಿದ ಹಿರಿಯ ನಾಗರೀಕರು, ಹೆಣ್ಣು ಮಕ್ಕಳು, ಯುವ ಸಮೂಹದವರೊಂದಿಗೆ ಸೌಜನ್ಯದಿಂದ ವರ್ತಿಸಲು ನಮೂನೆ-6 ನ್ನು ನೀಡಲು ಹಾಗೂ ನೋಟೀಸ್ ಗಳ ವಿಚಾರಣೆ ನಡೆಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ತಳಮಟ್ಟಲ್ಲಿ ಕಾರ್ಯನಿರ್ವಹಿಸುವ ಬಿ.ಎಲ್.ಓ ತೊಂದರೆ ಕೊಡದಂತೆ ಅಧಿಕಾರಿಗಳಿಗೆ ಸೂಚನೆ

ಇಡೀ ಎಸ್.ಐ. ಆರ್ ಪ್ರಕ್ರಿಯೆಯ ಯಶಸ್ವಿಗೆ ಶ್ರಮಿಸುತ್ತಿರುವ ಭೂತ್ ಮಟ್ಟದ ಅಧಿಕಾರಿಗಳಿಗೆ (ಬಿ.ಎಲ್.ಓ) ಗಳಿಗೆ ಅವರ ಮಾತೃ ಇಲಾಖೆಯ ಅಧಿಕಾರಿಗಳಾಗಲೀ ಅಥವಾ ಎಸ್.ಐ. ಆರ್ ಪ್ರಕ್ರಿಯೆಯ ಕಾರ್ಯಕ್ಕೆ ನೇಮಿಸಿಕೊಂಡ ಅಧಿಕಾರಿಗಳಾಗಲಿ ಯಾವುದೇ ರೀತಿಯ ತೊಂದರೆ ಕೊಡದೇ ಅವರೊಂದಿಗೆ ಸಂಯಮದೊಂದಿಗೆ ನಡೆದುಕೊಂಡು ಎಸ್.ಐ. ಆರ್ ಪ್ರಕ್ರಿಯೆಯ ಕಾರ್ಯ ನಿರ್ವಹಿಸಿಕೊಂಡು ಹೋಗಲು ಮತದಾರರ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಚ್ಚಿನ ಮುತುವರ್ಜಿಯಿಂದ ಎಸ್.ಐ.ಆರ್ ಕಾರ್ಯ ನಿರ್ವಹಣೆ ಅಗತ್ಯ

ಮತದಾರರ ಕೇಂದ್ರ ವಿಚಾರಣೆ ಭೇಟಿಯ ನಂತರ ಎಂ. ಜಿ ರಸ್ತೆಯಲ್ಲಿರುವ ಪಿಯುಬಿ ಕಟ್ಟಡದ 10ನೇ ಮಹಡಿಯಲ್ಲಿನ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯ ಚುನಾವಣಾಧಿಕಾರಿಗಳು ಮತದಾರರ ನೊಂದಣಾಧಿಕಾರಿಗಳು, ಸಹಾಯಕ ಮತದಾರರ ನೊಂದಣಾಧಿಕಾರಿಗಳು, ಬಿ. ಎಲ್. ಓ ಗಳು ಎಸ್.ಐ.ಆರ್ ಕಾರ್ಯದ ಯಶಸ್ವಿಗೆ ಎಲ್ಲರೂ ಈಗಾಗಲೇ ಸಾಕಷ್ಟು ಶ್ರಮಪಟ್ಟಿದ್ದು, ಎಸ್.ಐ.ಆರ್ ಕಾರ್ಯವನ್ನು ತ್ವರಿತ ಹಾಗೂ ಪರಿಣಾಮಕಾರಿಯಾಗಿಸಲು ಎಲ್ಲರೂ ಒಂದು ತಂಡವಾಗಿ, ಅತ್ಯಂತ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು.

ಮುಖ್ಯ ಚುನಾವಣಾಧಿಕಾರಿಗಳು ನೀಡಿದ ಇತರೆ ಸೂಚನೆಗಳು

  • ಓದು ಬರಹ ಗೊತ್ತಿಲ್ಲದ ಅನಕ್ಷರಸ್ತರಿಗೆ ನಮೂನೆ-6 ಭರ್ತಿ ಮಾಡಲು ಸಹಕರಿಸುವುದು
  • ಹಿರಿಯ ನಾಗರೀಕರಿಗೆ ಮಹಿಳೆಯರನ್ನು ಗೌರವಿಸುವುದು.
  • ಮತದಾರರನ್ನು ಸಂಯಮದಿಂದ ನಡೆದುಕೊಳ್ಳುವುದು.
  • ಅವರು ಒದಗಿಸಿರುವ ದಾಖಲೆಗಳನ್ನು ಪರಿಶೀಲನೆ ಮಾಡಿ ಸರಿ / ತಪ್ಪು ಇರುವ ಬಗ್ಗೆ ಹಾಗೂ ಅವರನ್ನು ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ಕೂಡಲೇ ಆಗಿಂದಾಗ್ಗೆ ಅವರಿಗೆ ಸರಿಯಾದ ಮಾಹಿತಿ ನೀಡುವುದು.
  • ಸಮಯ ಎಲ್ಲರಿಗೂ ಮೌಲ್ಯಯುತವಾಗಿದ್ದು, ಸಾರ್ವಜನಿಕರ ಸಮಯವನ್ನು ವ್ಯರ್ಥ ಮಾಡದೇ ಎಷ್ಟು ಸಾಧ್ಯವೋ ಅಷ್ಟು ಬೇಗ ಅವರ ಕಾರ್ಯ ಮುಗಿಸುವುದು.
  • ಸಾರ್ವಜನಿಕರನ್ನು ಕುಳಿತುಕೊಳ್ಳಲು ಹೇಳುವುದು, ಕುಡಿಯಲು ನೀರು ಕೊಡುವುದು.
  • ಎಸ್.ಐ.ಆರ್ ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರುಗಳು ಕೈಬಿಟ್ಟ ಬಗ್ಗೆ ಹಾಗೂ ಹೊಸದಾಗಿ ಹೆಸರು ಸೇರಿಸಲು ಅಕ್ಕ ಪಕ್ಕದ ಮನೆಯವರಿಗೆ ತಿಳಿಸಲು ಹೇಳುವಂತೆ ಸಾರ್ವಜನಿಕರಲ್ಲಿ ವಿನಂತಿಸುವುದು.
  • ಸಾರ್ವಜನಿಕರು ಒದಗಿಸಬೇಕಾದ ಅಗತ್ಯ ದಾಖಲಾತಿಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಅವರು ನೀಡಿದ ದಾಖಲಾತಿಗಳು ಸರಿ / ತಪ್ಪು ಇರುವ ಬಗ್ಗೆ ಕೂಡಲೇ ತಿಳಿಸಿ ಸರಿಯಾದ ದಾಖಲಾತಿ ನೀಡಲು ತಿಳಿಸುವುದು

ಮುಖ್ಯ ಚುನಾವಣಾಧಿಕಾರಿ ರವರ ಸೂಚನೆಯಂತೆ ನಿಯಮಬದ್ಧವಾಗಿ ಕಾರ್ಯನಿರ್ವಹಿಸಿ:ಜಗದೀಶ್ ಜಿ

ಸಭೆಯ ನಂತರ ಮಾತನಾಡಿದ ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಶ್ರೀ ಜಗದೀಶ್ ಜಿ, ರವರು ಮಾನ್ಯ ಮುಖ್ಯ ಚುನಾವಣಾಧಿಕಾರಿ ರವರು ನೀಡಿದ ಸೂಚನೆಯಂತೆ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ನಿಯಮಬದ್ಧವಾಗಿ ಕಾರ್ಯನಿರ್ವಹಿಸಿ ಎಸ್.ಐ.ಆರ್. ಕಾರ್ಯ ಯಶಸ್ವಿಗೊಳಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಜಿ., ಅಭಿವೃದ್ಧಿ ಅಪರ ಆಯುಕ್ತರಾದ ವೆಂಕಟಾಚಲಪತಿ, ಕಂದಾಯ ಅಪರ ಆಯುಕ್ತರಾದ ಶ್ರೀಮತಿ ಲಕ್ಷ್ಮಮ್ಮ, ಜಂಟಿ ಆಯುಕ್ತರುಗಳಾದ ರಂಗನಾಥ್.ಕೆ ಹಾಗೂ ಶ್ರೀ ಹೇಮಂತ್ ಶರಣ್, ಕಂದಾಯ ಅಧಿಕಾರಿಗಳು, ಚುನಾವಣಾ ತಹಶೀಲ್ದಾರ್ ವಿಭಾ ರಾಠೋಡ್, ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.


Share

You cannot copy content of this page