ಸಮಗ್ರ ಸುದ್ದಿ

ಸಬ್ಸಿಡಿ ಸಹಿತ, ಗೃಹೋಪಯೋಗಿ ಅಡುಗೆ ಅನಿಲ ಬಳಕೆಗೆ, ಆಧಾರ್ ಸಹಿತ ಬಯೋಮೆಟ್ರಿಕ್ ಕಡ್ಡಾಯ

Share

ನವದೆಹಲಿ: ಸಬ್ಸಿಡಿ ಸಹಿತ, ಗೃಹೋಪಯೋಗಿ ಅಡುಗೆ ಅನಿಲ ಬಳಕೆಗೆ, ಆಧಾರ್ ಸಹಿತ ಬಯೋಮೆಟ್ರಿಕ್ ಕಡ್ಡಾಯಗೊಳಿಸಿ, ಸರ್ಕಾರ ಆದೇಶಿಸಿದೆ. ಅಕ್ಟೋಬರ್ 1ರಿಂದ, ಬಯೋಮೆಟ್ರಿಕ್ ಆಧಾರ್ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ.

ಎಲ್ ಪಿಜಿ ಸಿಲಿಂಡರ್ ಗಳ ಮರುಪೂರಣ ಮಾಡುವ ಸಂದರ್ಭದಲ್ಲಿ, ಗ್ರಾಹಕರು ಬಯೋ ಮೆಟ್ರಿಕ್ ಆಧಾರ್ ದೃಢೀಕರಣವನ್ನು ಮಾಡುವುದು ಕಡ್ಡಾಯವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.

ಗೃಹೋಪಯೋಗಿ ಸಿಲಿಂಡರ್ ಗಳ ಪೂರೈಕೆ ಮತ್ತು ವಿತರಣೆಯಲ್ಲಿ ಅಕ್ರಮವನ್ನು ತಡೆಗಟ್ಟಲು, ಆಧಾರ್ ದೃಢೀಕರಣ ವ್ಯವಸ್ಥೆ ಜಾರಿಗೊಳಿಸುವುದು ಅಗತ್ಯವಾಗಿದೆ. ಈಗಾಗಲೇ ದೇಶದ 27.43 ಕೋಟಿ ಗ್ರಾಹಕರು ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಗ್ರಾಹಕರು, ಎಲ್ ಪಿಜಿ ಸಿಲಿಂಡರ್ ಮರುಪೂರಣದ ಸಮಯದಲ್ಲಿ ಸಹ, ಆಧಾರ್ ದೃಢೀಕರಣ ಮಾಡಲು ಅವಕಾಶವಿದೆ. ಅಲ್ಲದೆ, ವಿತರಕರ ಕಚೇರಿ ಅಥವಾ ತೈಲ ನಿಗಮಗಳ ಸಂಸ್ಥೆಯ ಮೊಬೈಲ್ ಆಪ್ ಮೂಲಕವೂ, ಆಧಾರ್ ದೃಢೀಕರಣ ಮಾಡಬಹುದಾಗಿದೆ.


Share

You cannot copy content of this page