ಬೆಂಗಳೂರು: ಪೂಜಾ, ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ಮಧ್ಯ ರೈಲ್ವೆಯು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲಿದೆ.
ರೈಲು ಸಂಖ್ಯೆ 01013 ಸಿಎಸ್ಎಂಟಿ ಮುಂಬೈ–ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು, 10.10.2026 ರಿಂದ 21.11.2026 ರವರೆಗೆ ಪ್ರತಿ ಶನಿವಾರ ಸಿಎಸ್ಎಂಟಿ ಮುಂಬೈನಿಂದ 00:35 ಗಂಟೆಗೆ ಹೊರಟು, ಅದೇ ದಿನ 23:55 ಗಂಟೆಗೆ ಎಸ್ಎಂವಿಟಿ ಬೆಂಗಳೂರನ್ನು ತಲುಪಲಿದೆ.
ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 01014 ಎಸ್ಎಂವಿಟಿ ಬೆಂಗಳೂರು–ಸಿಎಸ್ಎಂಟಿ ಮುಂಬೈ ವಿಶೇಷ ರೈಲು, 11.10.2026 ರಿಂದ 22.11.2026 ರವರೆಗೆ ಪ್ರತಿ ಭಾನುವಾರ ಎಸ್ಎಂವಿಟಿ ಬೆಂಗಳೂರಿನಿಂದ 04:30 ಗಂಟೆಗೆ ಹೊರಟು, ಮರುದಿನ 04:05 ಗಂಟೆಗೆ ಸಿಎಸ್ಎಂಟಿ ಮುಂಬೈ ತಲುಪಲಿದೆ
ಮಾರ್ಗಮಧ್ಯದಲ್ಲಿ, ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ದಾದರ್, ಥಾಣೆ, ಕಲ್ಯಾಣ್, ಲೋನಾವಾಲಾ, ಪುಣೆ, ಲೋನಂದ್, ಸತಾರಾ, ಕರಾಡ್, ಸಾಂಗ್ಲಿ, ಮಿರಜ್, ಕುಡಚಿ, ರಾಯಬಾಗ್, ಘಟಪ್ರಭಾ, ಬೆಳಗಾವಿ, ಲೊಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲುಗಳು (01013/01014) ಪ್ರತಿ ದಿಕ್ಕಿನಲ್ಲಿಯೂ 7 ಟ್ರಿಪ್ ಸಂಚರಿಸಲಿವೆ.
ಈ ರೈಲು 2 ಎಸಿ 2-ಟೈರ್ ಬೋಗಿಗಳು, 18 ಎಸಿ 3-ಟೈರ್ ಬೋಗಿಗಳು ಮತ್ತು 2 ಲಗೇಜ್-ಕಮ್-ಗಾರ್ಡ್-ಕಮ್-ಜನರೇಟರ್ ವ್ಯಾನ್’ಗಳು ಸೇರಿದಂತೆ ಒಟ್ಟು 22 ಬೋಗಿಗಳನ್ನು ಹೊಂದಿರುತ್ತದೆ.
