ನವದೆಹಲಿ: ನವದೆಹಲಿಯ ಭಾರತ್ ಮಂಟಪದಲ್ಲಿ ನವೆಂಬರ್ ಮೊದಲ ವಾರದಲ್ಲಿ 4 ದಿನ ನಿರಂತರವಾಗಿ ನವೀಕರಿಸಬಹುದಾದ ಇಂಧನ ಶೃಂಗಸಭೆ ಆಯೋಜಿಸಲಾಗಿದೆ.
ನವೆಂಬರ್ 2 ರಿಂದ 5 ರವರೆಗೆ ‘ಶೃಂಗಸಭೆ 2026’ ಹಮ್ಮಿಕೊಂಡಿದ್ದು, ದೇಶೀಯ ಮಾತ್ರವಲ್ಲದೆ, ಜಾಗತಿಕ ಉದ್ದಿಮೆದಾರರೂ ಭಾಗವಹಿಸಲಿದ್ದು, ಇದು ಭಾರತದ ನವೀಕರಿಸಬಹುದಾದ ಇಂಧನ ಬೃಹತ್ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ಶೃಂಗಸಭೆ ಸಿದ್ಧತೆ ಪರಿಶೀಲನೆ: ದೆಹಲಿಯಲ್ಲಿ ಇಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಮಂಗಳವಾರ ಬೆಳಗ್ಗೆ MNRE ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಹತ್ವದ ಶೃಂಗಸಭೆ ಬಗೆಗಿನ ಸಿದ್ಧತೆ ಪರಿಶೀಲಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ದೇಶಾದ್ಯಂತ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಮತ್ತಷ್ಟು ವೇಗಗೊಳಿಸುವ ಬಗ್ಗೆ ಚರ್ಚಿಸಿದರು.
ನವೆಂಬರ್ ನಲ್ಲಿ ಆಯೋಜಿಸುವ ಶೃಂಗಸಭೆಯಲ್ಲಿ ದೇಶದ ನಾಯಕರು, ಜಾಗತಿಕ ಉದ್ಯಮ ಮುಖಂಡರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ಬಗ್ಗೆ ಗಮನ ಸೆಳೆದರು.
